Connect with us

LATEST NEWS

ಮಂಗಳೂರು ಮಹಾನಗರಪಾಲಿಕೆ ಟಿಕೆಟ್ ಗಾಗಿ ಕಾಂಗ್ರೇಸ್ ಕಾರ್ಯಕರ್ತರ ಮಾರಾಮಾರಿ

ಮಂಗಳೂರು ಮಹಾನಗರಪಾಲಿಕೆ ಟಿಕೆಟ್ ಗಾಗಿ ಕಾಂಗ್ರೇಸ್ ಕಾರ್ಯಕರ್ತರ ಮಾರಾಮಾರಿ

ಮಂಗಳೂರು ಅಕ್ಟೋಬರ್ 30: ಮಂಗಳೂರು ಮಹಾನಗರಪಾಲಿಕೆ ಚುನಾವಣೆ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಲ್ಲಿ‌ ಭಿನ್ನಮತ ಸ್ಪೋಟಗೊಂಡು ಪಾಲಿಕೆ ಟಿಕೆಟ್ ಹಂಚಿಕೆ ವಿಷಯಕ್ಕೆ ಕಾರ್ಯಕರ್ತರ ನಡುವೆ ಮಾರಾಮಾರಿಯೇ ನಡೆದ ಘಟನೆ ನಡೆದಿದೆ.

ಮಂಗಳೂರು ನಗರದ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರು ಸುದ್ದಿಗೋಷ್ಟಿ ಕರೆದು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ್ದರು. ಈ ಸಂದರ್ಭ ಟಿಕೆಟ್ ಅಕಾಂಕ್ಷಿಗಳ ಮಧ್ಯೆ ಮತ್ತು ಕಾಂಗ್ರೆಸ್ ನಾಯಕರುಗಳ ಮಧ್ಯೆ ಮಾತಿನ ಚಕಮಕಿ ನಡೆದು ನಂತರ ಹೊಯ್ ಕೈ ಮಟ್ಟಕ್ಕೆ ಬೆಳೆದಿದೆ.

ಮಾಜಿ ಮೇಯರ್ ಗುಲ್ಝಾರ್ ಬಾನು ಹಾಗೂ ಮಾಜಿ ಶಾಸಕ ಮೊಯ್ದಿನ್ ಬಾವ ಅವರ ಬೆಂಬಲಿಗರ ನಡುವೆ ಸಾರ್ವಜನಿಕರ ಹಾಗೂ ಕಾಂಗ್ರೆಸ್ ಮುಖಂಡರ ಎದುರೇ ಹೋಯ್‌ ಕೈ ನಡೆದಿದೆ.

ಈ ಹಿಂದೆ ಸುರತ್ಕಲ್ ವಾರ್ಡ್ ನಲ್ಲಿ ಸ್ಪರ್ಧಿಸಿ ಸೋತಿದ್ದ ಗುಲ್ಝಾರ್ ಬಾನುಗೆ ಈ ಬಾರಿ ಮತ್ತೆ ಟಿಕೆಟ್ ನೀಡೋದಾಗಿ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಭರವಸೆ ನೀಡಿದ್ದರು ಎನ್ನಲಾಗಿದೆ.

ಆದರೆ ಇಂದು ಬಿಡುಗಡೆ ಗೊಳಿಸಿದ ಕಾಂಗ್ರೆಸ್ ಅಭ್ಯರ್ಥಿ ಪಟ್ಟಿಯಲ್ಲಿ ಗುಲ್ಜಾರ್ ಭಾನು ಹೆಸರು ಇರದ ಕಾರಣ ಅಸಮಾಧಾನಗೊಂಡ ಟಿಕೆಟ್ ಅಕಾಂಕ್ಷಿ ಗುಲ್ಝಾರ್ ಬಾನು ಪುತ್ರ ಮತ್ತು ಮೊಯಿದ್ದೀನ್ ಬಾವ ನಡುವೆ ಹೊಯ್‌ ಕೈ ನಡೆದಿದೆ.

Facebook Comments

comments