Connect with us

    FILM

    ಕೋರ್ಟ್ ನಲ್ಲಿ ರಮ್ಯಾ ಮುಖಭಂಗ – ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಬಿಡುಗಡೆಗೆ ಕೋರ್ಟ್​ ಅನುಮತಿ

    ಬೆಂಗಳೂರು ಜುಲೈ 20: ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಸಿನೆಮಾ ರಿಲೀಸ್ ಗೆ ಎರಡು ದಿನ ಇರುವಾಗ ಕೋರ್ಟ್ ಮೆಟ್ಟಿಲೇರಿದ ಸಿನೆಮಾ ನಟಿ ರಮ್ಯಾಗೆ ಮುಖಭಂಗವಾಗಿದ್ದು. ಕೋರ್ಟ್​ನಲ್ಲಿ ರಮ್ಯಾ ಅವರ ಅರ್ಜಿ ವಜಾ ಆಗಿದ್ದು, ಸಿನಿಮಾ ಬಿಡುಗಡೆಗೆ ಅನುಮತಿ ಸಿಕ್ಕಿದೆ.


    ಸದ್ಯ ಕನ್ನಡದಲ್ಲಿ ಭಾರೀ ನಿರಿಕ್ಷೆ ಹುಟ್ಟಿಸಿರುವ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಚಿತ್ರದ ವಿರುದ್ದ ಅದೇ ಚಿತ್ರದಲ್ಲಿ ಅತಿಥಿ ನಟಿಯಾಗಿ ನಟಿಸಿದ್ದ ರಮ್ಯ ಕೋರ್ಟ್ ಮೆಟ್ಟಿಲೇರಿದ್ದರು. ಈ ಸಿನಿಮಾದಲ್ಲಿ ತಮ್ಮ ವಿಡಿಯೋಗಳನ್ನು ಅನುಮತಿ ಇಲ್ಲದೇ ಬಳಸಿಕೊಳ್ಳಲಾಗಿದೆ ಎಂದು ನಟಿ ರಮ್ಯಾ ದಿವ್ಯ ಸ್ಪಂದನಾ (Ramya Divya Spandana) ಅವರು ಆರೋಪಿಸಿದ್ದರು. ಹಾಗಾಗಿ ಚಿತ್ರದಲ್ಲಿನ ತಮ್ಮ ದೃಶಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದರು. ಅಲ್ಲದೇ ಚಿತ್ರತಂಡಕ್ಕೆ ಲೀಗಲ್​ ನೋಟೀಸ್​ ಕಳಿಸಿದ್ದರು. ಇದರಿಂದ ಜುಲೈ 21ರಂದು ಸಿನಿಮಾ ಬಿಡುಗಡೆ ಆಗತ್ತೋ ಇಲ್ಲವೋ ಎಂಬ ಅನುಮಾನ ಮೂಡಿತ್ತು. ಆದರೆ ಕೋರ್ಟ್​ನಲ್ಲಿ ರಮ್ಯಾ (Ramya) ಅವರ ಅರ್ಜಿ ವಜಾ ಆಗಿದೆ. ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಬಿಡುಗಡೆಗೆ ನ್ಯಾಯಾಲಯ ಅನುಮತಿ ನೀಡಿದೆ.

    ನಿತಿನ್​ ಕೃಷ್ಣಮೂರ್ತಿ ಅವರ ನಿರ್ದೇಶನದಲ್ಲಿ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಮೂಡಿಬಂದಿದೆ. ಅಜನೀಶ್​ ಬಿ. ಲೋಕನಾಥ್​ ಅವರು ಸಂಗೀತ ನೀಡಿರುವ ಹಾಡುಗಳು ಗಮನ ಸೆಳೆದಿವೆ. ಅರವಿಂದ್​ ಎಸ್​. ಕಶ್ಯಪ್​ ಅವರು ಈ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ. ರಕ್ಷಿತ್​ ಶೆಟ್ಟಿ ಒಡೆತನದ ‘ಪರಂವಾ ಪಿಕ್ಚರ್ಸ್​’ ಮೂಲಕ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಬಿಡುಗಡೆ ಆಗುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply