Connect with us

    DAKSHINA KANNADA

    ಆತ್ಮಹತ್ಯೆಗೆ ಯತ್ನಿಸಿದ ದಂಪತಿ…ಪತಿ ಸಾವು ಪತ್ನಿ ಆಸ್ಪತ್ರೆಗೆ ದಾಖಲು…!!

    ಬಂಟ್ವಾಳ ಜುಲೈ 02 : ಪತಿ ಪತ್ನಿ ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಪತಿ ಮೃತಪಟ್ಟು, ಪತ್ನಿ ಗಂಭೀರ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಅನಂತಾಡಿಯ ಬಾಕಿಲ ಎಂಬಲ್ಲಿ ನಡೆದಿದೆ.


    ವಿಟ್ಲ ಅನಂತಾಡಿ ಬಾಕಿಲ ನಿವಾಸಿ ಪ್ರತಾಪ್ (35) ಮೃತಪಟ್ಟಿದ್ದು, ವೀಣಾ (32) ಗಂಭೀರ ಸ್ಥಿತಿಯಲ್ಲಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ರಾತ್ರಿ ನೇಣು ಬಿಗಿದುಕೊಂಡಿದ್ದು, ತಕ್ಷಣ ಮಾಹಿತಿ ತಿಳಿದು ಇಬ್ಬರನ್ನೂ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತಾಪ್ ಮೃತಪಟ್ಟಿರುವುದನ್ನು ವೈದ್ಯರು ದೃಢೀರಿಸಿದ್ದು, ಪತ್ನಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ವರ್ಗಾಯಿಸಿದ್ದಾರೆ.

    ದಂಪತಿಗಳಿಗೆ 5 ವರ್ಷದ ಅವಳಿ ಜವಳಿ ಮಕ್ಕಳಿದ್ದು, ಘಟನೆಯ ಸ್ಪಷ್ಟ ಕಾರಣ ತಿಳಿದಿಲ್ಲ ವಿಟ್ಲ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *