LATEST NEWS
ಲಾಕ್ ಡೌನ್ ನಲ್ಲಿ ನಕಲಿ ಪಾಸ್ ಬಳಸಿ ಮಂಗಳೂರಿನ ಲಾಡ್ಜ್ ಒಂದಲ್ಲಿ ರೂಮ್ ಮಾಡಿದ್ದ ಜೋಡಿ ಪೊಲೀಸ್ ವಶಕ್ಕೆ
ಮಂಗಳೂರು: ವಿಕೇಂಡ್ ಕರ್ಪ್ಯೂ ಇದ್ದರೂ ಕಾರಿಗೆ ನಕಲಿ ಪಾಸ್ ಅಂಟಿಸಿ ಅಪ್ರಾಪ್ತ ವಿಧ್ಯಾರ್ಥಿನಿಯನ್ನು ಜೊತೆ ನಗರದ ಲಾಡ್ಜ್ ಒಂದರಲ್ಲಿ ಜೊತೆಯಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ತರೀಕೆರೆಯವಳಾಗಿದ್ದು, ನಗರದ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಯುವಕ ಕುದ್ರೋಳಿ ನಿವಾಸಿಯಾಗಿದ್ದಾನೆ. ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ ವಸತಿಗೃಹವೊಂದರ ರೂಮ್‌ನಲ್ಲಿ ಇವರಿದ್ದ ಬಗ್ಗೆ ಬಂದರು ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಕೂಡಲೇ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಇಬ್ಬರು ಪ್ರತ್ಯೇಕ ರೂಮ್‌ನಲ್ಲಿದ್ದರೆಂದು ತಿಳಿದು ಬಂದಿದೆ. ಇವರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.