LATEST NEWS
ಗಂಗೊಳ್ಳಿಯಲ್ಲಿ ಮನೆ ಆವರಣ ಗೋಡೆ ವಿಚಾರ, ದಂಪತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ .!

ಬೈಂದೂರು: ಮನೆಯ ಆವರಣ ಗೋಡೆಯ ವಿಚಾರವಾಗಿ ಮಾತಿಗೆ ಮಾತು ಬೆಳೆದು ದಂಪತಿ ಮೇಲೆ ಮಾರಣಾಂತಿಕ ಹಲ್ಲೆ (assault) ನಡೆಸಿದ ಘಟನೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ಎಂಬಲ್ಲಿ ನಡೆದಿದೆ.

ವಾಸುದೇವ ಖಾರ್ವಿ ಯವರ ಮನೆಯ ಆವರಣ ಗೋಡೆಯ ವಿಚಾರವಾಗಿ ಪಕ್ಕದ ಮನೆಯ ಈರಣ್ಣ ಸುಂಕದ ಯಾನೆ ವೀರೇಶ ಅಕ್ರಮವಾಗಿ ಮನೆ ಪ್ರವೆಶ ಮಾಡಿ ಮಾರಕಾಸ್ತ್ರಗಳಿಂದ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಗಾಯಾಳುಗಳನ್ನು ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಗಂಭೀರ ಗಾಯವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
https://youtu.be/iEAAgCxL5jY
Continue Reading