LATEST NEWS
ದೇಶದ ಪ್ರಥಮ ಸ್ಟಾರ್ಟ್ಅಪ್ ಇಂಕ್ಯುಬೇಶನ್ ಸೆಂಟರ್ ಉದ್ಘಾಟನೆ

ದೇಶದ ಪ್ರಥಮ ಸ್ಟಾರ್ಟ್ಅಪ್ ಇಂಕ್ಯುಬೇಶನ್ ಸೆಂಟರ್ ಉದ್ಘಾಟನೆ
ಮಂಗಳೂರು ಡಿಸೆಂಬರ್ 29: ದೇಶದ ಪ್ರಥಮ ಸ್ಟಾರ್ಟ್ಅಪ್ ಇಂಕ್ಯುಬೇಶನ್ ಸೆಂಟರ್ ನ್ನು ಮಂಗಳೂರಿನಲ್ಲಿ ಇಂದು ಉದ್ಘಾಟಿಸಲಾಯಿತು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂಕ್ಯುಬೇಶನ್ ಸೆಂಟರ್ ಗೆ ಚಾಲನೆ ನೀಡಿದರು.
ನಿರ್ಮಲಾ ಸೀತಾರಾಮನ್ ಅವರು ತಮ್ಮ ಸಂಸದರ ನಿಧಿಯಿಂದ ಸುಮಾರು 1.50 ಕೋಟಿ ರೂಪಾಯಿಗಳನ್ನು ಈ ಸೆಂಟರ್ ಗಾಗಿ ನೀಡಿದ್ದು ಸ ಹೊಸ ಉದ್ಯಮ ಆರಂಭಿಸುವವರಿಗೆ ಅಗತ್ಯ ತರಬೇತಿ , ಮಾರ್ಗದರ್ಶನ ಮತ್ತು ಮೂಲ ಸೌಕರ್ಯವನ್ನು ಈ ಕೇಂದ್ರದ ಮೂಲಕ ನೀಡಲಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಂಸದರ ನಿಧಿಯನ್ನು ರಸ್ತೆ, ಕುಡಿಯುವ ನೀರು ಮೊದಲಾದ ಸೌಕರ್ಯಗಳಿಗೆ ಬಳಸಲಾಗುತ್ತದೆ. ಆದರೆ ಶಿಕ್ಷಣ ಕಾಶಿಯಾಗಿರುವ ದಕ್ಷಿಣಕನ್ನಡ ಜಿಲ್ಲೆಯ ವಿಧ್ಯಾವಂತರಿಗಾಗಿ ಈ ಉದ್ಯಮ ಶೀಲತೆ ಅವಕಾಶ ಮತ್ತು ಕಲಿಕಾ ಕೇಂದ್ರ ವನ್ನು ತೆರೆಯಲಾಗಿದ್ದು. ಜಿಲ್ಲೆಯ ವಿಧ್ಯಾವಂತರು ಐಟಿಬಿಟಿಗಾಗಿ ಬೆಂಗಳೂರು ಅಥವಾ ಹೊರ ರಾಜ್ಯಗಳಿಗೆ ತೆರಳುವುದನ್ನು ತಪ್ಪಿಸಲು ಇದು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಈ ಸೆಂಟರ್ ಉದ್ಯಮ ಮಾಡಲು ಮುಂದಾಗುವವರಿಗೆ ಸೂಕ್ತ ತರಬೇತಿಯ ಜೊತೆಗೆ ಹಣಕಾಸಿವ ನೆರವು ಹಾಗೂ ಉದ್ಯಮಕ್ಕೆ ಸಂಬಂಧಪಟ್ಟಂತೆ ತಜ್ಞ ವೃತ್ತಿಪರರಿಂದ ತರಭೇತಿ ಹಾಗೂ ಸಲಹೆಗಳನ್ನು ಒದಗಿಸುವಲ್ಲಿ ನಿರಂತರ ಚಟುವಟಿಕೆಗಳು ಇಲ್ಲಿ ನಡೆಯಬೇಕು ಎಂದು ಜಿಲ್ಲಾಡಳಿತಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿರ್ದೇಶನ ನೀಡಿದರು.
