FILM
ಒಡಿಶಾದಲ್ಲಿ ಅಭಿಮಾನಿಗಳನ್ನು ಕಂಡು ಬೆದರಿದ ಕರಾವಳಿ ಬೆಡಗಿ..!

ಅನುಷ್ಕಾ ಒಡಿಶಾಗೆ ಬಂದಿದ್ದಾರೆ ಅನ್ನೋ ಸುದ್ದಿ ತಿಳಿದ ತಕ್ಷಣ ಅವರನ್ನು ನೋಡಲು ನೂರಾರು ಅಭಿಮಾನಿಗಳು ಜಮಾಯಿಸಿದ್ದಾರೆ. ಅಭಿಮಾನಿಗಳನ್ನು ಕಂಡು ಬೆದರಿದ ನಟಿ ಅನುಷ್ಕಾ ಕಾರಿನಿಂದ ಇಳಿದು ಓಟಕ್ಕಿತ್ತಿದ್ದಾರೆ.
ಒಡಿಶಾ : ಕರಾವಳಿ ಬೆಡಗಿ, ಟಾಲಿವುಡ್ ಕ್ವೀನ್ ಅನುಷ್ಕಾ ಶೆಟ್ಟಿ ಸದ್ಯ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ. ತನ್ನ ಮದುವೆ ಬಗ್ಗೆ ಆಗಾಗ ಸುದ್ದಿಗಳು ತೇಲಿ ಬರುತ್ತಿದ್ದರೂ ತುಟಿಕ್ ಪಿಟಿಕ್ ಅನ್ನದೆ ತನ್ನ ಪಾಡಿನ ಕಾರ್ಯದಲ್ಲಿ ಮಗ್ನರಾಗಿರುವುದೇ ಅನುಷ್ಕಾ ಗುಣ.

ಹೊರಗಡೆ ಸಾರ್ವಜನಿಕವಾಗಿ ಹೆಚ್ಚೇನು ಕಾಣಿಸಿಕೊಳ್ಳದ ನಟಿ ಅಪರೂಪಗೊಮ್ಮೆ ಅಭಿಮಾನಿಗಳ ಕಣ್ಣಿಗೆ ಬೀಳುತ್ತಿರುತ್ತಾರೆ. ಬಹಿರಂಗವಾಗಿ ಈ ಅನುಷ್ಕಾ ಕಾಣಿಸಿಕೊಂಡಾಗ ಅಭಿಮಾನಿಗಳು ಮುತ್ತಿಕ್ಕಿಕೊಳ್ಳೋದು ಸಹಜವಾಗಿದೆ. ಒಡಿಶಾದ ಜೇಪೋರ್ ನಲ್ಲಿ ಅನುಷ್ಕಾ ನಟನೆಯ ಹೊಸ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ರಮ್ಯಾಕೃಷ್ಣ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಇತ್ತೀಚೆಗೆ ಅನುಷ್ಕಾ ತಮ್ಮ ಈ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಪಾಲ್ಗೊಳ್ಳೋದಕ್ಕಾಗಿ ಒಡಿಶಾಗೆ ತೆರಳಿದ್ದಾರೆ. ಅನುಷ್ಕಾ ಒಡಿಶಾಗೆ ಬಂದಿದ್ದಾರೆ ಅನ್ನೋ ಸುದ್ದಿ ತಿಳಿದ ತಕ್ಷಣ ಅವರನ್ನು ನೋಡಲು ನೂರಾರು ಅಭಿಮಾನಿಗಳು ಜಮಾಯಿಸಿದ್ದಾರೆ. ಅಭಿಮಾನಿಗಳನ್ನು ಕಂಡು ಬೆದರಿದ ನಟಿ ಅನುಷ್ಕಾ ಕಾರಿನಿಂದ ಇಳಿದು ಓಟಕ್ಕಿತ್ತಿದ್ದಾರೆ. ಕ್ರಿಶ್ ನಿರ್ದೇಶನದಲ್ಲಿ ಅನುಷ್ಕಾ ನಟನೆಯ ಸಿನಿಮಾ ಮೂಡಿ ಬರುತ್ತಿದೆ.