Connect with us

DAKSHINA KANNADA

ಅಯ್ಯೋ ದೇವ್ರೆ ಈ ಸಲವಾದ್ರೂ ಈ ಮಾತು ಸತ್ಯವಾಗಲಿ, ಕರಾವಳಿಯ ಈ ಬೆಡಗಿಗೆ ಮಾರ್ಚ್‌ನಲ್ಲಿ ನಿಶ್ಚಿತಾರ್ಥ ಏಪ್ರಿಲ್‌ನಲ್ಲಿ ಮದುವೆಯಂತೆ.!

ಹೈದ್ರಾಬಾದ್ : ಪ್ಯಾನ್‌ ಇಂಡಿಯಾ ಸ್ಟಾರ್‌ ,ಸಲಾರ್ ಖ್ಯಾತಿಯ ಪ್ರಭಾಸ್ ಮತ್ತು ಕರಾವಳಿ ಬೆಡಗಿ ನಟಿ ಅನುಷ್ಕಾ ಶೆಟ್ಟಿ ವಿವಾಹವಾಗಲಿದ್ದು ಅವರ ಮದುವೆಗೆ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂಬ ವದಂತಿಗಳು ಹರಡುತ್ತಿವೆ.

ಕರಾವಳಿಯ ಬೆಡಗಿ ಅನುಷ್ಕಾ ಶೆಟ್ಟಿ ತಮಿಳು ಮತ್ತು ತೆಲುಗಿನ ಪ್ರಮುಖ ನಟಿ. ಬ್ಲಾಕ್ ಬಾಸ್ಟರ್ ಬಾಹುಬಲಿ ಬಂದ ಮೇಲಂತೂ ಅನುಷ್ಕಾ ಶೆಟ್ಟಿ ಮಾತನಾಡಿಸಲು ಕಷ್ಟವಾಗಿದಂತೆ. ಒಂದಾನೊಂದು ಕಾಲದಲ್ಲಿ ಎರಡೂ ಭಾಷೆಗಳಲ್ಲಿ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಸ್ವೀಕರಿಸಲು ಸಮಯವಿಲ್ಲದಷ್ಟು ಬ್ಯುಸಿಯಾಗಿದ್ದ ಅನುಷ್ಕಾ ಕೈಯಲ್ಲಿ ಪ್ರಸ್ತುತ ಒಂದೇ ಒಂದು ಸಿನಿಮಾ ಕೂಡ ಇಲ್ಲ. ಇದಕ್ಕೆ ಕಾರಣಗಳು ಹಲವಾರು ವಯಸ್ಸು ಮತ್ತು ದೇಹದ ತೂಕ ಹೆಚ್ಚಳ ಕಾರಣ ಎನ್ನಲಾಗಿದೆ. ಅನುಷ್ಕಾ ಅವರ ಕೊನೆಯ ಚಿತ್ರ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿಸಿನಿಮಾ ಯಶಸ್ಸು ಕಂಡರೂ ಈ ಚೆಲುವೆ ಯಾಕೋ ತೀರಾ ಹಿಂದೆ ಬಿದ್ಲು. 42ರ ಅಸುಪಾಸಿನಲ್ಲಿರುವ ಅನುಷ್ಕಾ ಮದುವೆಯಾಗದೆ ಈಗಲೂ ಸಿಂಗಲ್ ಆಗಿಯೇ ಇದ್ದರೂ ಅವರ ಪ್ರಣಯದ ವದಂತಿಗಳು ಕಾಲಕಾಲಕ್ಕೆ ಮೇಲಿಂದ ಮೇಲೆ ಹರಿದಾಡುತ್ತಲೇ ಇರುತ್ತವೆ. ಅದರಲ್ಲೂ ಬಾಹುಬಲಿಯಲ್ಲಿ ನಟಿಸಿದ ನಂತರ ಪ್ರಭಾಸ್ ಮತ್ತು ಅನುಷ್ಕಾ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಅವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ನಂತರ, ಇಬ್ಬರೂ ಇದು ಕೇವಲ ವದಂತಿ ತಾವೀಬ್ಬರು ಉತ್ತಮ ಸ್ನೇಹಿತರು ಎಂದು ಹೇಳಿಕೊಂಡಿದ್ದರು. ಆದ್ರೆ ಇದೀಗ ಮತ್ತೆ ಅದೇ ಸುದ್ದಿ ಚಿತ್ರ ಸಂತೆಯಲ್ಲಿ ಹರಿದಾಡುತ್ತಲಿದೆ. ಸಲಾರ್ ಸೂಪರ್ ಸ್ಟಾರ್ ಪ್ರಭಾಸ್ ಹಾಗೂ ನಟಿ ಅನುಷ್ಕಾ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ. ಮಾರ್ಚ್ ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆಯಲಿದ್ದು, ಏಪ್ರಿಲ್ ನಲ್ಲಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ ಎಂಬ ವದಂತಿ ಟಾಲಿವುಡ್ ನಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಇದರಿಂದಾಗಿ ಪ್ರಭಾಸ್-ಅನುಷ್ಕಾ ಪ್ರೀತಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *