Connect with us

  LATEST NEWS

  ಅಯೋಧ್ಯೆ ರಾಮ ಪ್ರಾಣಪ್ರತಿಷ್ಠೆ ಹಿನ್ನಲೆ ಜನವರಿ 22ರಂದು ಷೇರು ಮಾರುಕಟ್ಟೆಗೆ ರಜೆ

  ಮುಂಬೈ ಜನವರಿ 19: ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿರುವ ಹಿನ್ನಲೆ ಈಗಾಗಲೇ ಕೇಂದ್ರ ಸರಕಾರ ತನ್ನ ನೌಕರರಿಗೆ ಅರ್ಧದಿನ ರಜೆ ಘೋಷಿಸಿದೆ. ಈ ನಡುವೆ ಶೇರ್ ಮಾರುಕಟ್ಟೆ ಕೂಡ ಸೋಮವಾರ ಜನವರಿ 22 ರಂದು ರಜೆ ಘೋಷಿಸಿದೆ.


  ಮಹಾರಾಷ್ಟ್ರ ಸರಕಾರವು ಸೋಮವಾರ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, 1881 ರ ಸೆಕ್ಷನ್ 25 ರ ಅಡಿಯಲ್ಲಿ ಘೋಷಿಸಲಾದ ಸಾರ್ವಜನಿಕ ರಜೆಯ ಕಾರಣ ಜನವರಿ 22 ರಂದು ಸೋಮವಾರ ವ್ಯಾಪಾರ ರಜೆಯನ್ನು ಘೋಷಿಸಲಾಗಿದೆ ಎಂದು ಎನ್‌ಎಸ್‌ಇ ತನ್ನ ಬಿಡುಗಡೆಯಲ್ಲಿ ತಿಳಿಸಿದೆ.

  ಈ ನಡುವೆ ಜನವರಿ 20 ರಂದು ಶನಿವಾರ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಇರಲಿದ್ದು, ಭಾರತೀಯ ಷೇರು ಮಾರುಕಟ್ಟೆಯು ಜನವರಿ 20 ರ ಶನಿವಾರದಂದು ಪೂರ್ಣ ವಹಿವಾಟು ಅವಧಿಯನ್ನು ಹೊಂದಿರುತ್ತದೆ ಎಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ತಿಳಿಸಿದೆ.

  Share Information
  Advertisement
  Click to comment

  You must be logged in to post a comment Login

  Leave a Reply