Connect with us

KARNATAKA

30 ನಿಮಿಷದಲ್ಲೇ ಕೊರೊನಾ ರಿಪೋರ್ಟ್‌..!

ರಾಜ್ಯದಲ್ಲಿ ಪ್ರಥಮ ಬಾರಿಗೆ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಪ್ರಯೋಗ

ಬಳ್ಳಾರಿ ಜೂನ್ 29: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿನ ಕೊರೊನಾ ನಾಗಲೋಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿಹಾಗೂ ಶಂಕಿತರಲ್ಲಿ ಸೋಂಕು ಪತ್ತೆ ಹಚ್ಚಿ ಕೂಡಲೇ ಚಿಕಿತ್ಸೆ ನೀಡಲು ಅನುಕೂಲವಾಗುವ ಮೂಲಕ ಮರಣ ಸಂಖ್ಯೆಯನ್ನು ತಡೆಯಲು ರಾಜ್ಯದಲ್ಲಿ ಪ್ರಥಮ ಬಾರಿಗೆ ಗಣಿನಾಡು ಬಳ್ಳಾರಿಯಲ್ಲಿ ರಾಪಿಡ್‌ ಆಂಟಿಜೆನ್‌ ಕಿಟ್‌ ಮೂಲಕ ಪರೀಕ್ಷೆಗೆ ಜಿಲ್ಲಾಡಳಿತ ಮುಂದಾಗಿದೆ.

ವೈರಸ್‌ ನಿಯಂತ್ರಣ, ಹರಡುವಿಕೆಯನ್ನು ತಪ್ಪಿಸುವ ಉದ್ದೇಶದಿಂದ ರಾಯಪಿಡ್‌ ಆಂಟಿಜೆನ್‌ ಟೆಸ್ಟ್‌ ಕಿಟ್‌ನ್ನು ಈಗಾಗಲೇ ದೆಹಲಿಯಲ್ಲಿ ಪ್ರಯೋಗಿಸಲಾಗಿದೆ. ಈಗ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಬಾರಿಗೆ ಗಣಿ ಜಿಲ್ಲೆಯಲ್ಲಿ ಪ್ರಯೋಗಕ್ಕೆ ಮುಂದಾಗಿದೆ. ಈಗಾಗಲೇ 4 ಸಾವಿರ ಕಿಟ್‌ಗಳನ್ನು ಡಿಎಂಎಫ್‌ ಅನುದಾನದಡಿ ಖರೀದಿಗೆ ಜಿಲ್ಲಾಡಳಿತ ನಿರ್ಧರಿಸಿದ್ದು, ಇನ್ನೇರಡು ದಿನಗಳಲ್ಲಿ ಜಿಲ್ಲೆಗೆ ಕಿಟ್‌ಗಳು ಆಗಮಿಸಲಿವೆ. ಈ ಮೂಲಕ ಕೊರೊನಾ ವೈರಸ್‌ ತಡೆಗಟ್ಟಲು ಸಜ್ಜುಗೊಳಿಸಲಾಗುತ್ತಿದೆ.


ಕಂಟೈನ್ಮೆಂಟ್‌ ವಲಯಗಳು ಅಥವಾ ಹಾಟಾಸ್ಟಾಟ್‌ ವಲಯಗಳು, ಅನಾರೋಗ್ಯದಂತಹ ಐಎಲ್‌ಐ, ಎಲ್ಲಾ ರೋಗ ಲಕ್ಷ ಣದ ಜನರಿಗೆ ಕಿಟ್‌ ಮೂಲಕ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಇದಲ್ಲದೆ, ಜಿಲ್ಲಾಸ್ಪತ್ರೆ, ವಿಮ್ಸ್‌ ಸೇರಿದಂತೆ ಪ್ರತಿಯೊಂದು ಸರಕಾರಿ ಫೀವರ್‌ ಕ್ಲಿನಿಕ್‌ಗಳಲ್ಲಿ ರಾಪಿಡ್‌ ಆಂಟಿಜೆನ್‌ ಕಿಟ್‌ ಬಳಸುವ ಮೂಲಕ ರೋಗಿಗಳಿಗೆ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ.


ಇದಕ್ಕಾಗಿ ಈಗಾಗಲೇ ವೈದ್ಯರ ತಂಡವನ್ನು ಸಹ ಸಿದ್ಧತೆ ನಡೆಸಲಾಗುತ್ತಿದೆ. ರಾಪಿಡ್‌ ಆಂಟಿಜನ್‌ ಕಿಟ್‌ನಿಂದ ಕೊರೊನಾ ವೈರಸ್‌ನ್ನು ಕೇವಲ 30 ನಿಮಿಷಗಳಲ್ಲಿಪತ್ತೆ ಹಚ್ಚಬಹುದಾಗಿದೆ. ಈ ಹಿಂದೆ ಶಂಕಿತ ವ್ಯಕ್ತಿಗಳಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಿ ಕನಿಷ್ಠ 24-48 ಗಂಟೆಗಳ ಕಾಲ ಕಾಯುವಂತ ಪರಿಸ್ಥಿತಿ ಇತ್ತು. ಇದರಿಂದ ಆ ವ್ಯಕ್ತಿಯ ಆರೋಗ್ಯದಲ್ಲಿ ರುಪೇರಾಗುವ ಸಾಧ್ಯತೆಗಳು ಹೆಚ್ಚಾಗಿದ್ದವು. ಅಲ್ಲದೆ, ಸೋಂಕು ಹರಡಲು ದಾರಿ ಮಾಡಿಕೊಟ್ಟಂತಾಗಿತ್ತು. ಹೀಗಾಗಿ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತಿತ್ತು. ಆದರೆ ರಾಪಿಡ್‌ ಆಂಟಿಜೆನ್‌ ಟೆಸ್ಟ್‌ನಿಂದ ಪರೀಕ್ಷಾ ವರದಿ ಕೂಡಲೇ ಕೈಸೇರುವುದರಿಂದ ಸೋಂಕು ದೃಢಪಟ್ಟ ವ್ಯಕ್ತಿಗೆ ತುರ್ತಾಗಿ ಚಿಕಿತ್ಸೆ ನೀಡಬಹುದಾಗಿದೆ. ಅಲ್ಲದೆ, ಮರಣ ಪ್ರಮಾಣ ಸಹ ಕಡಿಮೆ ಮಾಡಬಹುದಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *