LATEST NEWS
ಕೇರಳ ಭೇಟಿ ನೀಡಿದ್ದ ಯುವಕನಲ್ಲಿ ಕೊರೊನಾ ಸೋಂಕು

ಕೇರಳ ಭೇಟಿ ನೀಡಿದ್ದ ಯುವಕನಲ್ಲಿ ಕೊರೊನಾ ಸೋಂಕು
ಉಡುಪಿ ಎಪ್ರಿಲ್ 14: ಕಟ್ಟು ನಿಟ್ಟಿನ ಕ್ರಮಗಳಿಂದ ಜಿರೋ ಕೊರೊನಾ ಜಿಲ್ಲೆಯಾಗಿದ್ದ ಉಡುಪಿಯಲ್ಲಿ ಇಂದು ಕೊರೊನಾ ಪ್ರಕರಣ ಪತ್ತೆಯಾಗಿದೆ. ಕೇರಳದಿಂದ ಉಡುಪಿಗೆ ಆಗಮಿಸಿದ ಯುವಕನೊಬ್ಬನಲ್ಲಿ ಕೊರೊನೊ ಸೊಂಕು ಕಾಣಿಸಿಕೊಂಡಿದೆ.
29ರ ಹರೆಯದ ಈ ಯುವಕ, ತನ್ನ ಸ್ನೇಹಿತರೊಂದಿಗೆ ಕೆಲಸದ ನಿಮಿತ್ತ ಕೇರಳದ ತಿರುವನಂತಪುರಂಗೆ ತೆರಳಿದ್ದು, ಹಿಂದಿರುಗಿ ಬರುವಾಗ ಕೇರಳ- ಕರ್ನಾಟಕ ಗಡಿಯ ತಲಪಾಡಿ ಚೆಕ್‌ಪೋಸ್ಟ್‌ನಿಂದ ನೇರವಾಗಿ ಉಡುಪಿಗೆ ಕರೆತಂದು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಮಾರ್ಚ್ 29ರಂದು ಇವರ ಸ್ಯಾಂಪಲ್ ಪಾಸಿಟಿವ್ ಆಗಿ ಬಂದಿತ್ತು. ಆ ಬಳಿಕ ಅವರು ಕೆಎಂಸಿ ಹಾಗೂ ನಗರದ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು.

12 ದಿನಗಳ ಚಿಕಿತ್ಸೆಯ ಬಳಿಕ ಇವರ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಆತನ ಸ್ಯಾಂಪಲ್ ನ ವರದಿಯೂ ಬಂದಿದ್ದು, ಅದು ಈಗಲೂ ಪಾಸಿಟಿವ್ ಆಗಿಯೇ ಇತ್ತು.
ಹೀಗಾಗಿ ಈತನಿಗೆ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಇನ್ನೂ 14 ದಿನಗಳ ಚಿಕಿತ್ಸೆ ಮುಂದುವರಿಯಲಿದೆ. 12 ದಿನಗಳ ಚಿಕಿತ್ಸೆ ಮುಗಿದ ಬಳಿಕ ಮತ್ತೊಮ್ಮೆ ಸ್ಯಾಂಪಲ್ ನ್ನು ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಈ ನಡುವೆ ಉಡುಪಿ ಜಿಲ್ಲೆಯಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾದ ಮೂವರು ಯುವಕರಲ್ಲಿ ಮಂಗಳವಾರ ಸಂಜೆಯವರೆಗೆ ಇಬ್ಬರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.