Connect with us

DAKSHINA KANNADA

ನೆಲ್ಯಾಡಿ – ಕೊರೊನಾ ಸೊಂಕಿಗೆ ಒಂದೇ ದಿನ ದಂಪತಿ ಬಲಿ

ಪುತ್ತೂರು ಜುಲೈ 16: ಕೊರೊನಾ ಸೊಂಕಿಗೆ ಒಂದೇ ದಿನ ಪತಿ,ಪತ್ನಿ ಇಬ್ಬರೂ ಬಲಿಯಾಗಿರುವ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ.


ಮೃತರಾದ ದಂಪತಿಗಳು ನೆಲ್ಯಾಡಿ ನಿವಾಸಿಗಳಾದ ಪಿ.ವಿ.ವರ್ಗೀಸ್ (74) ಮೇರಿ ವರ್ಗೀಸ್‌.ಪಿ.ವಿ (73) ಎಂದು ಗುರುತಿಸಲಾಗಿದ್ದು,


ಜೂನ್ 25 ರಂದು ಇಬ್ಬರಿಗೂ ಜ್ವರ ಕಾಣಿಸಿಕೊಂಡಿತ್ತು, ಬಳಿಕ ಸ್ಥಳೀಯವಾಗಿ ಔಷಧಿ ಪಡೆದು ಗುಣಮುಖರಾಗಿದ್ದರು. ನಂತರ ಮತ್ತೆ ಇಬ್ಬರಲ್ಲೂ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಇಬ್ಬರನ್ನೂ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆಯ ವೇಳೆ ಇಬ್ಬರಿಗೂ ಕೊರೊನಾ ಪಾಸಿಟೀವ್ ದೃಢಪಟ್ಟಿತ್ತು. ಜೂನ್ 15 ರಂದು ಇಬ್ಬರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು .