LATEST NEWS
ಉಡುಪಿ ಕೊರೊನಾ ಎರಡನೇ ಅಲೆ ಭೀತಿ.. ಎಂಐಟಿಯಲ್ಲಿ ನೂರರ ಗಡಿಯಲ್ಲಿ ಕೊರೊನಾ ಪ್ರಕರಣ
ಉಡುಪಿ ಜಿಲ್ಲೆಯಲ್ಲಿ ಕೊರೊನಾ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಸಿಂಗಲ್ ನಂಬರ್ ನಲ್ಲಿದ್ದ ಕೊರೊನಾ ಸೊಂಕಿತರ ಸಂಖ್ಯೆ ಕಳೆದ ನಾಲ್ಕು ದಿನಗಳಿಂದ ಹೆಚ್ಚಾಗುತ್ತಿದೆ.
ಇನ್ನು ಉಡುಪಿಯ ಕೊರೊನಾ ಪ್ರಕರಣಗಳಲ್ಲಿ ಹೆಚ್ಚಾಗಿ ಮಣಿಪಾಲ ಕ್ಯಾಂಪಸ್ ನಲ್ಲಿ ಕಲಿಯುತ್ತಿರುವ ವಿಧ್ಯಾರ್ಥಿಗಳಿಂದಲೇ ಬಂದಿದೆ. ಈಗಾಗಲೇ ಮಣಿಪಾಲ ಕ್ಯಾಂಪಸ್ ನಲ್ಲಿ ಒಟ್ಟು 95 ಕೇಸುಗಳು ಪತ್ತೆಯಾಗಿದ್ದು, ಮಣಿಪಾಲ ಕ್ಯಾಂಪಸ್ಸನ್ನು ಜಿಲ್ಲಾಧಿಕಾರಿಗಳ ಸೂಚನೆಯಂತೆ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿದ ಉಡುಪಿ ಡಿಹೆಚ್ ಓ ಡಾ. ಸುಧೀರ್ ಚಂದ್ರ ಸೂಡಾ ಎಂಐಟಿ ಕ್ಯಾಂಪಸ್ ನ 5000 ವಿದ್ಯಾರ್ಥಿಗಳಿಗೆ ಕೊರೋನಾ ಟೆಸ್ಟ್ ನ್ನು ಒಂದು ವಾರದಿಂದ ನಿರಂತರ ಮಾಡಲಾಗುತ್ತಿದೆ ಎಂದು ತಿಳಿಸಿದರು. ಈಗಾಗಲೇ ಜಿಲ್ಲೆಯ ನಗರ ಭಾಗದಲ್ಲಿ ಹೆಚ್ಚು ಪಾಸಿಟಿವ್ ಕೇಸುಗಳು ಪತ್ತೆಯಾಗುತ್ತಿದ್ದು, ಸಾರ್ವಜನಿಕ ಸ್ಥಳ, ಸಮಾರಂಭಗಳಲ್ಲಿ ಸಾರ್ವಜನಿಕರು ನಿಗಾವಹಿಸಿ ಮಾಸ್ಕ್ ಸಾಮಾಜಿಕ ಅಂತರ ಕಾಪಾಡಬೇಕೆಂದು ಡಿಎಚ್ಓ ತಿಳಿಸಿದ್ದು. ಉಡುಪಿಯಲ್ಲಿ ಕೊರೊನಾ ಎರಡನೇ ಅಲೆ ಮರುಕಳಿಸಲು ಅವಕಾಶ ಕೊಡಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.