LATEST NEWS
ಕೊರೊನಾ ಪ್ರಕರಣ ಹಿನ್ನಲೆ ಯೆನೆಪೊಯದ 9 ಶಿಕ್ಷಣ ಸಂಸ್ಥೆಗಳು ತಾತ್ಕಾಲಿಕ ಬಂದ್
ಮಂಗಳೂರು, ಮಾ.16: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಏರಿಕೆ ಹಿನ್ನಲೆ ಯೆನೆಪೊಯ ಶಿಕ್ಷಣ ಸಂಸ್ಥೆ ತನ್ನ 9 ಶಿಕ್ಷಣ ಸಂಸ್ಥೆಗಳನ್ನು ತಾತ್ಕಾಲಿಕವಾಗಿ ಇಂದಿನಿಂದ ಬಂದ್ ಮಾಡಿದ್ದು, ಸಂಸ್ಥೆಯ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಆನ್‌ಲೈನ್ ತರಗತಿಗಳನ್ನು ಮುಂದುವರಿಸಲು ನಿರ್ಧರಿಸಿದೆ.
ಯೆನೆಪೊಯ ಸಂಸ್ಥೆಯಲ್ಲಿ 30 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನಲೆ, ವಿಧ್ಯಾರ್ಥಿಗಳ ಆರೋಗ್ಯ ದೃಷ್ಠಿಯಿಂದ ಸಂಸ್ಥೆ ಸ್ವಯಂ ಪ್ರೇರಿತ ಬಂದ್ ನಿರ್ಧಾರ ಮಾಡಿದೆ. ಯೆನೆಪೊಯ ಮೆಡಿಕಲ್ ಕಾಲೇಜು, ಡೆಂಟಲ್, ನರ್ಸಿಂಗ್, ಫಿಸಿಯೋಥೆರಪಿ, ಫಾರ್ಮಸಿ ಕಾಲೇಜು ಮತ್ತು ರಿಸರ್ಚ್ ಸೆಂಟರ್, ಹೆಲ್ತ್ ಕೇರ್ ಪ್ರೊಫೆಶನಲ್ಸ್, ಆಯುರ್ವೇದ ಕಾಲೇಜು, ನ್ಯಾಚುರೋಪತಿ ಕಾಲೇಜುಗಳನ್ನು ಬಂದ್ ಮಾಡಲಾಗಿದೆ.
ಇದೇ ವೇಳೆ ಇಂಟರ್ನಿಗಳು, ಪಿಜಿ ವಿದ್ಯಾರ್ಥಿಗಳು ಮತ್ತು ನರ್ಸಿಂಗ್ ಸಿಬ್ಬಂದಿ ತಮ್ಮ ಸೇವೆಗಳಿಗೆ ಹಾಜರಾಗಬಹುದಾಗಿದೆ. ಮೆಡಿಕಲ್ ಕಾಲೇಜು ಆಸ್ಪತ್ರೆಯೂ ಕಾರ್ಯಾಚರಿಸುತ್ತಿದ್ದು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ತಮ್ಮ ಕೆಲಸಗಳಿಗೆ ಹಾಜರಾಗಬಹುದು. ನಿಗದಿಗೊಂಡಿರುವ ಪರೀಕ್ಷೆಗಳಿಗೆ ಸಂಬಂಧಿಸಿ ಪರೀಕ್ಷಾ ನಿಯಂತ್ರಕರು ಪ್ರತ್ಯೇಕ ಸುತ್ತೋಲೆಯನ್ನು ಹೊರಡಿಸುವುದಾಗಿಯೂ ಯೆನೆಪೊಯ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ. ಗಂಗಾಧರ ಸೋಮಯಾಜಿ ಕೆ.ಎಸ್. ಸುತ್ತೋಲೆಯಲ್ಲಿ ತಿಳಿಸಿದ್ದಾರೆ.