Connect with us

    LATEST NEWS

    ಓಡಿಶಾ – ಗೂಡ್ಸ್ ರೈಲು ಹಾಗೂ ಎರಡು ಪ್ಯಾಸೆಂಜರ್ ರೈಲುಗಳ ನಡುವೆ ಅಪಘಾತ – 50ಕ್ಕೂ ಹೆಚ್ಚು ಸಾವಿನ ಶಂಕೆ

    ಓಡಿಶಾ ಜೂನ್ 02: ಓಡಿಶಾದಲ್ಲಿ ಭೀಕರ ರೈಲು ದುರಂತ ಸಂಭವಿಸಿದ್ದು. ಕೋರಮಂಡಲ ಎಕ್ಸ್ ಪ್ರೆಸ್ ರೈಲಿಗೆ ಗೂಡ್ಸ್ ರೈಲು ಡಿಕ್ಕಿಯಾದ ಪರಿಣಾಮ 300ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 30ಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ ಎಂದು ಹೇಳಲಾಗಿದೆ.


    ಬಹನಾಗ ರೈಲು ನಿಲ್ದಾಣದಲ್ಲಿ ಈ ದುರ್ಘಟನೆ ನಡೆದಿದ್ದು, ಗೂಡ್ಸ್ ರೈಲಿಗೆ ಕೋರಮಂಡಲ ಎಕ್ಸ್ ಪ್ರೆಸ್  ರೈಲು ಡಿಕ್ಕಿ ಹೊಡೆದಿದ್ದು, ಅದರ 12 ಬೋಗಿಗಲು ಉರುಳಿ ಬಿದ್ದಿದೆ. ಬಳಿಕ ಇದೇ ಟ್ರ್ಯಾಕ್ ನಲ್ಲಿ ಬಂದ ಯಶವಂತಪುರ ಹೌರಾ ಎಕ್ಸ್ ಪ್ರೇಸ್ ರೈಲು ಹಳಿ ಮೇಲೆ ಬಿದ್ದದ್ದ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ.  ಮೂರು ರೈಲು ಒಂದಾದರ ಮೇಲೆ ಒಂದರಂತೆ ಅಪಘಾತ ಸಂಭವಿಸಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.


    ಈ ಬೋಗಿಗಗಳಲ್ಲಿ ಪ್ರಯಾಣಿಕರು ಇದ್ದರು ಎಂಬುದು ತಿಳಿದುಬಂದಿದೆ. ದುರ್ಘಟನೆಯಲ್ಲಿ ಸಾವು-ನೋವಿನ ಕುರಿತು ಇನ್ನೂ ಸರಿಯಾದ ಮಾಹಿತಿ ತಿಳಿದುಬಂದಿಲ್ಲ.


    ಸುದ್ದಿ ತಿಳಿಯುತ್ತಿದ್ದಂತೆ ಕೆಲವರು ಅಪಘಾತ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಅಪಘಾತ ಸ್ಥಳದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಹೆಚ್ಚುವರಿ ನೆರವಿನ ಅಗತ್ಯವಿದ್ದರೆ ತಿಳಿಸುವಂತೆ ಬಲಸೋರ್ ಜಿಲ್ಲಾಧಿಕಾರಿ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply