Connect with us

  UDUPI

  ಮೋಟಾರು ವಾಹನ ಸಾರಿಗೆ ಕಾರ್ಮಿಕ ಕಾಯ್ದೆಯ ಉಲ್ಲಂಘನೆ : ಆರೋಪಿಗೆ ಶಿಕ್ಷೆ

  ಉಡುಪಿ, ಆಗಸ್ಟ್ 18: ಹನುಮಾನ್ ಟ್ರಾನ್ಸ್ ಪೋರ್ಟ ಕಂಪೆನಿ ಪ್ರೈವೇಟ್ ಕಂಪನಿ ಲಿಮಿಟೆಡ್ ಜಿಟ್ಪಾಡಿ ಕಂಪೆನಿಯ ವ್ಯವಸ್ಥಾಪಕ ನಿರ್ದೆಶಕರಾದ ವಿಲಾಸ್ ನಾಯಕ್ ರವರು ಮೋಟಾರು ಸಾರಿಗೆ ಉದ್ಯಮೆಯಲ್ಲಿ ನಮೂನೆ 11 ರಲ್ಲಿ ಹೆಚ್ಚುವರಿ ಕೆಲಸದ ಹಾಜರಾತಿ ಪುಸ್ತಕವನ್ನು ನಿರ್ವಹಿಸಿ ಅದರಲ್ಲಿ ಶಶಿಧರ ಬಿ. ಎಚ್ ರವರು ಹೆಚ್ಚುವರಿ ಕೆಲಸವನ್ನು ಮಾಡಿದ ಬಗ್ಗೆ ಪುಸ್ತಕದಲ್ಲಿ ನಮೂದಿಸದೇ ಇದ್ದುದಲ್ಲದೇ ಆನಂದ ಮೂರ್ತಿ ಮತ್ತು ರಾಜೇಶ್ ಯಾದವ್ ಕಾರ್ಮಿಕ ಅಧಿಕಾರಿಗಳು, ಉದ್ದಿಮೆಗೆ ಭೇಟಿ ನೀಡಿದಾಗ ಕಂಟ್ರೋಲ್ ಪುಸ್ತಕವನ್ನು ತಪಾಸಣೆಗೆ ನೀಡದೇ ಮತ್ತು ಕಾಂಪನ್‍ಸೇಟರಿ ರಜೆಯ ಪುಸ್ತಕವನ್ನು ತಪಾಸಣೆಗೆ ನೀಡದೇ ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿದ ಬಗ್ಗೆ ಅಪರಾಧವನ್ನು ಎಸಗಿದ್ದಾರೆಂದು ದೂರನ್ನು ದಿನಾಂಕ: 2-6-2010 ರಂದು ಮಾನ್ಯ ನ್ಯಾಯಾಲಯದಲ್ಲಿ ದಾಖಲಿಸಿರುತ್ತಾರೆ.
  ಈ ಪ್ರಕರಣವು ಮಾನ್ಯ ಉಡುಪಿ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿ ವಿರುಧ್ದ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶರಾದ ಶ್ರೀ ಮಂಜುನಾಥ್ ಎಂ.ಎಸ್ ರವರು ಆರೋಪಿಗೆ ಮೋಟಾರು ವಾಹನ ಸಾರಿಗೆ ಕಾರ್ಮಿಕ ಕಾಯ್ದೆಯ ಕಲಂ.32 ರಡಿ ರೂ 500/- ದಂಡ ಶಿಕ್ಷೆ ವಿಧಿಸಿ ü ದಿನಾಂಕ 27-07-2017 ರಂದು ತೀರ್ಪು ನೀಡಿರುತ್ತಾರೆ.

  Share Information
  Advertisement
  Click to comment

  You must be logged in to post a comment Login

  Leave a Reply