Connect with us

    KARNATAKA

    ದಕ್ಷಿಣ ರೈಲ್ವೇಯಿಂದ ವಂದೇ ಭಾರತ್ ಎಕ್ಸ್ ಪ್ರೆಸ್ ವಿಶೇಷ ರೈಲು ಸಂಚಾರ ಮುಂದುವರಿಕೆ..!

    ಹುಬ್ಬಳ್ಳಿ : ವಂದೇ ಭಾರತ್ ಎಕ್ಸ್ ಪ್ರೆಸ್ ವಿಶೇಷ ರೈಲು ಸಂಚಾರ ಮುಂದುವರಿಸಲು ದಕ್ಷಿಣ ರೈಲ್ವೆ ವಲಯ ನಿರ್ಧರಿಸಿದೆ.

     

    ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಮತ್ತು ಮೈಸೂರು ನಿಲ್ದಾಣಗಳ ನಡುವೆ ಸಂಚರಿಸುವ ಸಾಪ್ತಾಹಿಕ ವಂದೇ ಭಾರತ್ ವಿಶೇಷ ರೈಲುಗಳ ಸೇವೆಯನ್ನು ಮುಂದುವರಿಸಲು, ಅಸ್ತಿತ್ವದಲ್ಲಿರುವ ಟಿಕೆಟ್ ದರ್, ಬೋಗಿಗಳ ಸಂಯೋಜನೆ, ನಿಲುಗಡೆಗಳು, ವೇಳಾಪಟ್ಟಿ ಮತ್ತು ಸೇವೆಗಳ ದಿನಗಳೊಂದಿಗೆ ಈ ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಮಾರ್ಚ್ 27, 2024 ರವರೆಗೆ ವಿಸ್ತರಿಸಲಾಗುತ್ತಿದೆ ಎಂದು ದಕ್ಷಿಣ ರೈಲ್ವೆ ವಲಯವು ಸೂಚಿಸಿದೆ.

    ಅವುಗಳ ಮಾಹಿತಿ ಈ ಕೆಳಗಿನಂತಿವೆ:

    1. ರೈಲು ಸಂಖ್ಯೆ 06037 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ವಂದೇ ಭಾರತ್ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಫೆಬ್ರುವರಿ 7 ರಿಂದ ಮಾರ್ಚ್ 27, 2024 ರವರೆಗೆ ಪ್ರತಿ ಬುಧವಾರ (8 ಟ್ರಿಪ್) ಸಂಚರಿಸಲಿದೆ. ಈ ಮೊದಲು ಜನವರಿ 31, 2024 ರವರೆಗೆ ಸಂಚರಿಸಲು ಸೂಚಿಸಲಾಗಿತ್ತು.

    2. ರೈಲು ಸಂಖ್ಯೆ 06038 ಮೈಸೂರು-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ವಂದೇ ಭಾರತ್ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಫೆಬ್ರುವರಿ 7 ರಿಂದ ಮಾರ್ಚ್ 27, 2024 ರವರೆಗೆ ಪ್ರತಿ ಬುಧವಾರ (8 ಟ್ರಿಪ್) ಸಂಚರಿಸಲಿದೆ. ಈ ಮೊದಲು ಜನವರಿ 31, 2024 ರವರೆಗೆ ಸಂಚರಿಸಲು ಸೂಚಿಸಲಾಗಿತ್ತು.

    II. ರೈಲುಗಳ ಸಂಚಾರ ರದ್ದು/ತಡವಾಗಿ ಪ್ರಾರಂಭ

    ಕೊಪ್ಪಳ ಯಾರ್ಡ್ ದಲ್ಲಿನ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 63 ರಲ್ಲಿ ರಸ್ತೆ ಕೆಳಸೇತುವೆಗೆ ಸಂಬಂಧಿಸಿದ ಸುರಕ್ಷತಾ ಕಾಮಗಾರಿ ಹಿನ್ನೆಲೆಯಲ್ಲಿ, ಈ ಕೆಳಗಿನ ಕೆಲ ರೈಲುಗಳ ಸೇವೆಯಲ್ಲಿ ತಾತ್ಕಾಲಿಕವಾಗಿ ಫೆಬ್ರವರಿ 4, 2024 ರಂದು ಸಂಚಾರ ರದ್ದು ಮತ್ತು ತಡವಾಗಿ ಪ್ರಾರಂಭ ಮಾಡಲಾಗುತ್ತಿದೆ.

    ರದ್ದು

    1. ರೈಲು ಸಂಖ್ಯೆ 07337 ಎಸ್.ಎಸ್.ಎಸ್ ಹುಬ್ಬಳ್ಳಿ-ಗುಂತಕಲ್ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲನ್ನು ಫೆಬ್ರವರಿ 4, 2024 ರಂದು ಸಂಚಾರ ರದ್ದಾಗಲಿದೆ.

    2. ರೈಲು ಸಂಖ್ಯೆ 07338 ಗುಂತಕಲ್-ಎಸ್.ಎಸ್.ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲನ್ನು ಫೆಬ್ರವರಿ 4, 2024 ರಂದು ಸಂಚಾರ ರದ್ದಾಗಲಿದೆ.

    ತಡವಾಗಿ ಪ್ರಾರಂಭ

    1. ರೈಲು ಸಂಖ್ಯೆ 07381 ಎಸ್.ಎಸ್.ಎಸ್ ಹುಬ್ಬಳ್ಳಿ-ಕಾರಟಗಿ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಫೆಬ್ರವರಿ 4, 2024 ರಂದು 60 ನಿಮಿಷ ತಡವಾಗಿ ಹೊರಡಲಿದೆ.

    2. ರೈಲು ಸಂಖ್ಯೆ 07382 ಕಾರಟಗಿ-ಎಸ್.ಎಸ್.ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಫೆಬ್ರವರಿ 4, 2024 ರಂದು 60 ನಿಮಿಷ ತಡವಾಗಿ ಹೊರಡಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply