LATEST NEWS
ಮಂಗಳೂರು – ರಸ್ತೆ ಬದಿ ಮರಕ್ಕೆ ಡಿಕ್ಕಿ ಹೊಡೆದ ಕಂಟೈನರ್ ಲಾರಿ

ಮಂಗಳೂರು ಮೇ 10: ಅಡ್ಡ ಬಂದ ವಾಹನವೊಂದನ್ನು ತಪ್ಪಿಸಲು ಹೋಗಿ ಕಂಟೈನರ್ ಲಾರಿಯೊಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಕೈಕಂಬ ಬಳಿಯ ಪ್ಲೈಓವರ್ ಕೆಳಗೆ ನಡೆದಿದೆ.
ದೊಡ್ಡ ಕಂಟೈನರ್ ಲಾರಿಯ ಸಾಗುತ್ತಿರುವ ವೇಳೆ ಏಕಾಏಕಿ ಅಡ್ಡ ಬಂದ ವಾಹನವೊಂದನ್ನು ತಪ್ಪಿಸುವ ಸಲುವಾಗಿ ಚಾಲಕನ ವಾಹನವನ್ನು ತಿರುಗಿಸಿದ್ದಾನೆ, ಈ ವೇಳೆ ಕಂಟೈನರ್ ಲಾರಿಯ ಮುಂಭಾಗ ಸಂಪೂರ್ಣ ಟರ್ನ್ ಆಗಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಲಾರಿ ಮುಂಭಾಗಕ್ಕೆ ಹಾನಿಯಾಗಿದೆ. ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.