LATEST NEWS
ಕರ್ನಾಟಕ ಕಾಂಗ್ರೇಸ್ ಪಕ್ಷದ ಎಟಿಎಂ- ಯೋಗಿ ಆದಿತ್ಯನಾಥ್

ಕರ್ನಾಟಕ ಕಾಂಗ್ರೇಸ್ ಪಕ್ಷದ ಎಟಿಎಂ- ಯೋಗಿ ಆದಿತ್ಯನಾಥ್
ಮಂಗಳೂರು ಮಾರ್ಚ್ 6: ಕರ್ನಾಟಕ ರಾಜ್ಯ ಕಾಂಗ್ರೇಸ್ ಪಾಲಿಗೆ ಹಣ ನೀಡುವ ಎಟಿಎಂ ಇದ್ದಂತೆ, ರಾಜ್ಯದಲ್ಲಿ ಜಾರಿಯಾಗುವ ಪ್ರತಿ ಯೋಜನೆಯಿಂದ ಜನರ ದುಡ್ಡನ್ನು ಕಾಂಗ್ರೇಸ್ ಸರಕಾರ ಲೂಟಿ ಮಾಡುತ್ತಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಬಿಜೆಪಿಯ ಜನ ಸುರಕ್ಷಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ ಈಶಾನ್ಯದ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ತ್ರಿಪುರಾ, ನಾಗಾಲ್ಯಾಂಡನಲ್ಲಿ ಕೂಡ ಕಾಂಗ್ರೆಸ್ ಶೂನ್ಯ ಗಳಿಸಿದೆ ಈ ಹಿನ್ನಲೆಯಲ್ಲಿ ಕರ್ನಾಟಕ ಕೂಡ ಕಾಂಗ್ರೆಸ್ ಮುಕ್ತ ರಾಜ್ಯ ಆಗಬೇಕು ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ 86 ಲಕ್ಷ ರೈತರ 1 ಲಕ್ಷದ ವರೆಗೆ ರೈತರ ಸಾಲ ಮನ್ನಾ ಮಾಡಿದ್ದೇನೆ ಇದು ಕರ್ನಾಟಕದಲ್ಲಿ ಯಾಕೆ ಸಾದ್ಯ ವಾಗಿಲ್ಲ ಎಂದು ಅವರು ಪ್ರಶ್ನಿಸಿದರು. ಕರ್ನಾಟಕ ದಲ್ಲಿರುವುದು ರೈತವಿರೋಧಿ, ಹಿಂದೂ ವಿರೋಧಿ ಸರಕಾರ ಎಂದು ಅವರು ಕಿಡಿಕಾರಿದರು.