Connect with us

DAKSHINA KANNADA

ಶಾಸಕರ ಹೆಸರಲ್ಲಿ ಮಠ ಇದ್ದರೂ ಅವರದ್ದೇ ಸರಕಾರ ದೇವಸ್ಥಾನಗಳನ್ನು ಧ್ವಂಸಗೊಳಿಸುತ್ತಿದೆ…!!

ಪುತ್ತೂರು ಸೆಪ್ಟೆಂಬರ್ 20: :ಮೈಸೂರಿನ ನಂಜನಗೂಡಿನಲ್ಲಿ ದೇವಸ್ಥಾನ ತೆರವುಗೊಳಿಸಿದ ಬಿಜೆಪಿ ಸರಕಾರದ ವಿರುದ್ದ ಮತ್ತು ಸರ್ವ ಧರ್ಮಿಯರ ಧಾರ್ಮಿಕ ಕೇಂದ್ರಗಳನ್ನು ಉಳಿಸಿವಂತೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್‌ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿದರು.


ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್‌ರವರು ಇಲ್ಲಿನ ಶಾಸಕ ಸಂಜೀವ ಮಠಂದೂರುರವರ ಹೆಸರಿನಲ್ಲಿಯೇ ಮಠವಿದೆ. ಆದರೂ ಅವರ ಸರಕಾರ ಮಠ, ಮಂದಿರಗಳನ್ನು ತೆರವುಗೊಳಿಸುತ್ತಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಹೆಸರಿನಲ್ಲಿರುವ ಕಟೀಲ್ ಅವರ ಸಂಬಂಧವೇ ಇಲ್ಲ. ಪಂಪ್‌ವೆಲ್ ಪ್ಲೈ ಓವರ್ ಅವರ ಜೀವ ಮಾನದ ಸಾಧನೆ.

ಕಟೀಲು ದೇವಿಯ ಮೇಲಿನ ಭಕ್ತಿ ಶ್ರದ್ದೆಯು ನಳಿನ್ ಕುಮಾರ್‌ಗೆ ನಂಜನಗೂಡಿನ ಮಾದೇವಮ್ಮನ ಮೇಲೂ ಇರಲಿ. ನಳಿನ್ ಕುಮಾರ್  ಹೆಸರಿನೊಂದಿಗಿರುವ ಕಟೀಲ್ ಅವರಿಗೆ ಸೂಕ್ತವಲ್ಲ. ಅವರ ಹೆಸರನ್ನು ನಳಿನ್ ಕುಮಾರ್ ಪಂಪ್‌ವೆಲ್ ಎಂದು ಮರುನಾಮಕರಣ ಮಾಡಬೇಕು. ಬಿಜೆಪಿ ಪ್ರತಿಪಕ್ಷದಲ್ಲಿದ್ದಾಗ ದೇವಸ್ಥಾನ ತೆರವಾದರೆ ಅಗ ಧರ್ಮದ ರಕ್ಷಣೆ, ಅವರೇ ಅಧಿಕಾರದಲ್ಲಿರುವಾಗ ತೆರವುಗೊಳಿಸದರೆ ಧರ್ಮದ ಭಕ್ಷಣೆ. ಬೇರೆ ಯಾವುದೇ ಪಕ್ಷ ಆಡಳಿತದಲ್ಲಿರುವಾಗ ದೇವಸ್ಥಾನ ತೆರವುಗೊಳಿಸುತ್ತಿದ್ದರೆ ನಳಿನ್ ಕುಮಾರ್ ಚರ್ಮ ಹರಿದುಹೋಗುವ ರೀತಿಯಲ್ಲಿ ಉರುಳುಸೇವೆ ನಡೆಸುತ್ತಿದ್ದರು ಎಂದು ಲೇವಡಿ ಮಾಡಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *