LATEST NEWS
ಸರ್ಕ್ಯೂಟ್ ಹೌಸ್ ನಲ್ಲಿ ಕಾಂಗ್ರೇಸ್ ಪಕ್ಷದ ಸಭೆ- ಭದ್ರತೆಗೆ ಸಿಟ್ಟಾದ ಕಾಂಗ್ರೇಸ್ ಮುಖಂಡರು
ಸರ್ಕ್ಯೂಟ್ ಹೌಸ್ ನಲ್ಲಿ ಕಾಂಗ್ರೇಸ್ ಪಕ್ಷದ ಸಭೆ- ಭದ್ರತೆಗೆ ಸಿಟ್ಟಾದ ಕಾಂಗ್ರೇಸ್ ಮುಖಂಡರು
ಮಂಗಳೂರು ಮಾರ್ಚ್ 21: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರ ಜೊತೆ ರಾಹುಲ್ ಗಾಂಧಿ ಸಭೆ ನಡೆಸಿದ್ದಾರೆ.
ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಈ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ 13 ವಿಧಾನಸಭಾ ಕ್ಷೇತ್ರದ 26 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಭಾಗಿಯಾಗಿದ್ದರು, ಈ ಸಭೆಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ತಂತ್ರಗಾರಿಕೆ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಸಭೆಯ ಬಳಿಕ ಹಿರಿಯ ಕಾಂಗ್ರೇಸ್ ಮುಖಂಡರೊಂದಿಗೆ ರಾಹುಲ್ ಸಭೆ ನಡೆಸಿದ್ದಾರೆ.
ಈ ನಡುವೆ ಬಿಗಿ ಭದ್ರತೆಯ ಹಿನ್ನಲೆಯಲ್ಲಿ ಪಾಸ್ ಇಲ್ಲದ ಕಾಂಗ್ರೇಸ್ ನಾಯಕರನ್ನು ಎಸ್ ಪಿಜಿ ಪಡೆ ಸರ್ಕ್ಯೂಟ್ ಹೌಸ್ ನ ಒಳಗೆ ಬೀಡದೆ ತಡೆದಿದ್ದಾರೆ. ಇದು ಕಾಂಗ್ರೇಸ್ ಮುಖಂಡರ ಸಿಟ್ಟಿಗೆ ಕಾರಣವಾಗಿತ್ತು. KPCC ಅಧ್ಯಕ್ಷ ಜಿ ಪರಮೇಶ್ವರ್ ಬಳಿ ಸ್ಥಳೀಯ ನಾಯಕರು ದೂರು ಹೇಳಿಕೊಂಡು,ಎಸ್ ಪಿ ಜಿ ಪಡೆ ವಿರುದ್ದ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಸರಕಾರಿ ಬಂಗಲೆ ಸರ್ಕ್ಯೂಟ್ ಹೌಸ್ ನಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿರುವುದರ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರಿ ಬಂಗಲೆಯಲ್ಲಿ ಪಕ್ಷದ ಸಭೆ ನಡೆಸುವುದರ ಮೂಲಕ ಸರಕಾರದ ನಿಯಮವನ್ನು ಗಾಳಿ ತೂರಿದ್ದಾರೆ ಎಂದು ಹೇಳಲಾಗಿದೆ. ನಿಯಮ ಪ್ರಕಾರ ಪಕ್ಷದ ಸಭೆ ಸರ್ಕಾರಿ ಬಂಗಲೆಯಲ್ಲಿ ಮಾಡುವಂತಿಲ್ಲ ಆದರೂ ಕೂಡ ಕಾಂಗ್ರೇಸ್ ಪಕ್ಷ ತಮ್ಮ ಸಭೆ ನಡೆಸಿದೆ ಎಂದು ಆರೋಪಿಸಲಾಗಿದೆ.