LATEST NEWS
ಉದಯ್ ಕುಮಾರ್ ಗೆ ತಪ್ಪಿದ ಟಿಕೆಟ್ ಕಾರ್ಕಳದಲ್ಲಿ ಕಾಂಗ್ರೇಸ್ ಕಾರ್ಯಕರ್ತರಿಂದ ಪ್ರತಿಭಟನೆ

ಉದಯ್ ಕುಮಾರ್ ಗೆ ತಪ್ಪಿದ ಟಿಕೆಟ್ ಕಾರ್ಕಳದಲ್ಲಿ ಕಾಂಗ್ರೇಸ್ ಕಾರ್ಯಕರ್ತರಿಂದ ಪ್ರತಿಭಟನೆ
ಉಡುಪಿ ಎಪ್ರಿಲ್ 16: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ನಿನ್ನೆ ಕಾಂಗ್ರೇಸ್ ತನ್ನ ಪಟ್ಟಿ ಬಿಡುಗಡೆ ಮಾಡಿದೆ. ಈ ನಡುವೆ ಟಿಕೆಟ್ ಪಡೆಯಲು ವಿಫಲರಾದ ಆಕಾಂಕ್ಷಿಗಳ ಬೆಂಬಲಿಗರಿಂದ ಪ್ರತಿಭಟನೆಗಳು ರಾಜ್ಯಾದ್ಯಂತ ನಡೆಯುತ್ತಿದೆ.
ಕರಾವಳಿ ಜಿಲ್ಲೆ ಉಡುಪಿಯಲ್ಲೂ ಕೂಡ ಕಾಂಗ್ರೇಸ್ ಗೆ ಪ್ರತಿಭಟನೆಯ ಬಿಸಿ ತಟ್ಟಿದೆ. ಕಾರ್ಕಳದಲ್ಲಿ ಕಾಂಗ್ರೇಸ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರು ಟಿಕೆಟ್ ವಂಚಿತರಾಗಿದ್ದಕ್ಕೆ ಅವರ ಬೆಂಬಲಿಗರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.

ಉದಯ್ ಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಸುಮಾರು ಮೂರು ಸಾವಿರಕ್ಕೂ ಅಧಿಕ ಮಂದಿ ಕಾರ್ಕಳ ತಾಲೂಕು ಕಚೇರಿ ಬಳಿ ಇರುವ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅಲ್ಲಿಂದ ಮೆರವಣಿಗೆಯಲ್ಲಿ ಸಾಗಿದ ಉದಯ್ ಕುಮಾರ್ ಬೆಂಬಲಿಗರು ಕಾಂಗ್ರೇಸ್ ಶಾಸಕ ಗೋಪಾಲ ಭಂಡಾರಿ ಅವರ ಕಚೇರಿ ಎದುರು ಸೇರಿದರು. ಮೆರವಣಿಗೆಯುದ್ದಕ್ಕು ಕಾಂಗ್ರೇಸ್ ಹಿರಿಯ ಮುಖಂಡ ವೀರಪ್ಪ ಮೊಯಿಲಿ ಅವರ ವಿರುದ್ದ ಘೋಷಣೆ ಕೂಗಿದ ಬೆಂಬಲಿಗರು, ವೀರಪ್ಪ ಮೊಯಿಲಿ ಪ್ರತಿಕೃತಿ ದಹಿಸಲು ಪ್ರಯತ್ನಿಸಿದರು. ಈ ವೇಳೆ ಮಧ್ಯ ಪ್ರವೇಶಿದ ಪೊಲೀಸರು ಅದನ್ನು ವಿಫಲಗೊಳಿಸಿದರು.
ಈ ನಡುವೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಉದಯ್ ಕುಮಾರ್ ಶೆಟ್ಟಿ ನನಗೆ ಬಿ ಫಾರಂ ಸಿಗುವ ವಿಶ್ವಾಸವಿದ್ದು, ಎಲ್ಲರೂ ಶಾಂತಿಯಿಂದ ಇರುವಂತೆ ಮನವಿ ಮಾಡಿದರು.
VIDEO