Connect with us

  DAKSHINA KANNADA

  ಗೃಹ ಸಚಿವರ ಮುಂದೆ ಕೈ ಕಚ್ಚಾಟ

  ಗೃಹ ಸಚಿವರ ಮುಂದೆ ಕೈ ಕಚ್ಚಾಟ

  ಮಂಗಳೂರು,ಸೆಪ್ಟಂಬರ್ 20: ರಾಜ್ಯ ಗೃಹ ಸಚಿವರ ಎದುರೇ ಕಾಂಗ್ರೆಸ್ ಮುಖಂಡರು ಪರಸ್ಪರ ಕಚ್ಚಾಡಿಕೊಂಡ ಘಟನೆ ಮಂಗಳೂರು ಕಾಂಗ್ರೇಸ್ ಭವನದಲ್ಲಿ ನಡೆದಿದೆ.ರಾಜ್ಯದ ಕಾನೂನು ಸುವ್ಯವಸ್ಥೆ ಹೊತ್ತಿರುವ ಗೃಹ ಸಚಿವರ ಮುಂದೆಯೇ ಕಾನೂನು ಮೀರಿ ಜಗಳವಾಡಿದ ಜಿಲ್ಲೆಯ ಕಾಂಗ್ರೇಸ್ ನಾಯಕರ ವರ್ತನೆ ಕಂಡು ಸ್ವತಹ ಗೃಹ ಸಚಿವ ರಾಮಲಿಂಗರೆಡ್ಡಿಯವರನ್ನೇ ಮುಜುಗರಕ್ಕೀಡಾಗಿ ಮಾಡಿದೆ. ವಿವಿಧ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸಿದ್ದ ಗೃಹ ಸಚಿವರು ಮಧ್ಯಾಹ್ನ ಕಾಂಗ್ರೇಸ್ ಕಛೇರಿಗೆ ಭೇಟಿ ನೀಡಿ ಕಾರ್ಯಕರ್ತರ ಸಭೆ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವಿರುದ್ಧ ಸದಾ ಅಸಮಾಧಾನವನ್ನು ಕಾರುತ್ತಿದ್ದ ಸುರತ್ಕಲ್ ಕ್ಷೇತ್ರದ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಗೃಹ ಸಚಿವರ ಜೊತೆ ವೇದಿಕೆ ಹಂಚಿಕೊಂಡಿರುವುದು ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರನ್ನು ಕೆರಳಿಸಿತ್ತು. ಈ ಕಾರಣಕ್ಕಾಗಿ ವಿಜಯಕುಮಾರ್ ಶೆಟ್ಟಿಯನ್ನು ಏಕ ವಚನದಲ್ಲಿ ಹೀಯಾಳಿಸಿ ತನ್ನ ಸ್ವಭಾವವನ್ನು ಬಹಿರಂಗವಡಿಸಿದ ಚಂದ್ರಪ್ರಕಾಶ್ ಶೆಟ್ಟಿ ವಿಜಯ್ ಕುಮಾರ್ ಶೆಟ್ಟಿಯವರ ಕಾಲರ್ ಹಿಡಿದೆಳೆದು ಹಲ್ಲೆಗೆ ಯತ್ನ ನಡೆಸಿದ್ದಾರೆ. ಕಾರ್ಯಕರ್ತರ ಸಭೆ ಮುಗಿದ ಬಳಿಕ ಮತ್ತೆ ವಿಜಯಕುಮಾರ್ ಶೆಟ್ಟಿಯವರ ಮೇಲೆ ಮುಗಿಬಿದ್ದ ಚಂದ್ರಪ್ರಕಾಶ್ ಶೆಟ್ಟಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರ ವಿರುದ್ಧ ಮಾಧ್ಯಮಗಳಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡುವ ನಿಮಗೆ ಕಾಂಗ್ರೇಸ್ ಕಛೇರಿಗೆ ಬರಲು ನಾಚಿಕೆಯಾಗುವುದಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಹೃದಯ ಸಂಬಂಧ ಅಪರೇಷನ್ ಮಾಡಿಸಿಕೊಂಡು ಬಂದಿದ್ದ ಹಿರಿಯ ಕಾಂಗ್ರೇಸ್ ಮುಖಂಡ ವಿಜಯಕುಮಾರ್ ಶೆಟ್ಟಿಯವರ ವಿರುದ್ಧ ಒರ್ವ ಜನಪ್ರತಿನಿಧಿ ರಕ್ಕಸನಾಗಿ ವರ್ತಿಸಿದ ಜಿಲ್ಲಾ ಪಂಚಾಯತ್ ಸದಸ್ಯನ ವಿರುದ್ಧ ಕಾಂಗ್ರೇಸ್ ಪಕ್ಷದಲ್ಲೇ ಇದೀಗ ಅಸಮಾಧಾನದ ಹೊಗೆ ಹತ್ತಿಕೊಂಡಿದೆ. ಈ ಎಲ್ಲಾ ಘಟನೆಗಳು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರ ಮುಂದೆಯೇ ನಡೆದರೂ, ತನಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಸಚಿವರು ಮೌನಕ್ಕೆ ಶರಣಾಗಿದ್ದರು. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹೊಣೆ ಹೊತ್ತ ಗೃಹ ಸಚಿವರಿಗಂತು ಮುಖಂಡರ ಈ ಕಚ್ಚಾಟ ಕಿರಿಕಿರಿಯನ್ನೂ ಉಂಟು ಮಾಡಿತ್ತು. ಕಾನೂನು ಸುವ್ಯವಸ್ಥೆ, ಸಾಮರಸ್ಯದ ಜೀವನ, ಒಗ್ಗಟ್ಟಿನ ಮಂತ್ರ ಪಠಿಸುವ ಕಾಂಗ್ರೇಸ್ ಪಕ್ಷದ ಮುಖಂಡರ ಈ ಎಲ್ಲಾ ವೇದವಾಕ್ಯಗಳು ಇಂದು ಕಾಂಗ್ರೇಸ್ ನಲ್ಲಿ ಬಟಾ ಬಯಲಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply