LATEST NEWS
ಕಾಂಗ್ರೇಸ್ ನವರ ಪ್ರಚೋದನಕಾರಿ ಹೇಳಿಕೆಗಳೇ ಗಲಭೆಗೆ ಕಾರಣ – ಯಡಿಯೂರಪ್ಪ

ಕಾಂಗ್ರೇಸ್ ನವರ ಪ್ರಚೋದನಕಾರಿ ಹೇಳಿಕೆಗಳೇ ಗಲಭೆಗೆ ಕಾರಣ – ಯಡಿಯೂರಪ್ಪ
ಮಂಗಳೂರು ಡಿಸೆಂಬರ್ 21: ಕಾಂಗೇಸ್ ಪಕ್ಷದವರ ಹೇಳಿಕೆ ಪ್ರಚೋದನೆಗಳೇ ಮಂಗಳೂರು ಗಲಭೆಗೆ ಪ್ರಮುಖ ಕಾರಣ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಯಾರ ಹೇಳಿಕೆಗಳಿಂದ ಗಲಭೆಗಳಾಗಿವೆ ಎನ್ನುವುದು ಇಡೀ ಜಗತ್ತಿಗೆ ತಿಳಿದಿದೆ ಎಂದು ಹೇಳಿದ ಅವರು, ಬೆಂಕಿ ಹಚ್ಚುವ ಕೆಲಸವನ್ನು ಮಾಡಿದ ಕಾಂಗ್ರೇಸ್ ನವರು ಮಾಡಿದ್ದು ಅವರ ಸಹಕಾರದಿಂದಲೇ ಈ ಗಲಭೆ ನಡೆದಿದೆ ಎಂದರು.

ಬೇಜವಬ್ದಾರಿ ಹೇಳಿಕೆಗಳನ್ನು ಯಾರು ಬೇಕಾದರೂ ಕೊಡಬಹುದು ಸತ್ಯ ಸಂಗತಿ ಸದ್ಯದಲ್ಲೆ ತಿಳಿಯಲಿದೆ ಎಂದರು. ಕರ್ಪ್ಯೂ ಮುಗಿದ ಮೇಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಿಯೋಗ ಮಂಗಳೂರಿನಲ್ಲಿ ಒಂದು ವಾರ ಬೇಕಾದರೂ ಇರಲಿ ಅವರಿಗೆ ಬೇಕಾದ ವ್ಯವಸ್ಥೆ ಮಾಡಿಕೊಡಲಾಗುವುದೆಂದು ಸಿಎಂ ಹೇಳಿದರು.