DAKSHINA KANNADA
ಮಂಗಳೂರು – ಹಿರಿಯ ಕಾಂಗ್ರೇಸ್ ಮುಖಂಡ ಜಯಾನಂದ ದೇವಾಡಿಗ ನಿಧನ

ಮಂಗಳೂರು ಜುಲೈ 1: ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಕಾಂಗ್ರೇಸ್ ನ ಹಿರಿಯ ಮುಖಂಡ ಜಯಾನಂದ ದೇವಾಡಿಗ ನಿಧನರಾಗಿದ್ದಾರೆ.
ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ, ಹಿಂದುಳಿದ ಜಾತಿಗಳನ್ನು ಒಗ್ಗೂಡಿಸಿಕೊಂಡು ಚಿನ್ನಪ್ಪ ರೆಡ್ಡಿ ವರದಿ, ಮಂಡಲ ವರದಿಯ ಜಾರಿಗೆ ಒತ್ತಾಯಿಸಿ ಹೋರಾಟಗಳನ್ನು ಜಯಾನಂದ ದೇವಾಡಿಗ. ಸಂಘಟಿಸಿದವರು ಶಾಲಾ ದಿನಗಳಲ್ಲೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಹಿಸಸಿದ್ದರು. ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಅವರು ಭೂ ಸುಧಾರಣೆ ಮಂಡಳಿ ಸದಸ್ಯರಾಗಿ ಸೇವೆಸಲ್ಲಿಸಿದ್ದರು. ಸಮಾಜದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ, ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದರು.

ಅವಿಭಜಿತ ದಕ್ಷಿಣ ಕನ್ನ ಜಿಲ್ಲೆಯಲ್ಲಿ ಹಿಂದುಳಿದ ಜಾತಿಗಳನ್ನು ಸಂಘಟಿಸಿದ್ದರು. ಜಿಲ್ಲೆಯಲ್ಲಿ ದೇವಾಡಿಗ ಸುಧಾರಕ ಸಂಘವನ್ನು ಸ್ಥಾಪಿಸಿ ರಾಜ್ಯ ಮಟ್ಟಕ್ಕು ವಿಸ್ತರಿಸಿ ಸಮುದಾಯದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸುಧಾರಣೆ ಗೆ ಬುನಾದಿ ಹಾಕಿದ್ದರು. ಜಯಾನಂದ ದೇವಾಡಿಗ ಅವರ ಸಮಾಜ ಸೇವೆಯನ್ನು ಪ್ರಶಂಸಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಪತ್ರ ಬರೆದಿದ್ದರು. ಇಂದು ಬಜಾಲ್ ಆದರ್ಶ ನಗರದಲ್ಲಿ ನಿಧನರಾದರು. ಅವರು ಮಡದಿ ಸರೋಜಿನಿ ದೇವಾಡಿಗ, ಮಕ್ಕಳು, ಮೊಮ್ಮಕ್ಕಳನ್ನು ಅಗಲಿದ್ದಾರೆ