LATEST NEWS
ಮಂಗಳೂರು – ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ಮೋಹನ್ ಶೆಟ್ಟಿ ನಿಧನ

ಮಂಗಳೂರು ಜುಲೈ 24 : ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೋಹನ್ ಶೆಟ್ಟಿ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಕಾಂಗ್ರೇಸ್ ಪಕ್ಷದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮೋಹನ್ ಶೆಟ್ಟಿ ಅವರ ನಿಧನಕ್ಕೆ ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡರು ಕಂಬನಿ ಮಿಡಿದಿದ್ದಾರೆ. ನಾಳೆ ಬೆಳಿಗ್ಗೆ ಕಾರ್ ಸ್ಟ್ರೀಟ್ ನ ವಿಠೋಬ ಮಂದಿರ ರಸ್ತೆಯಲ್ಲಿರುವ ಅವರ ಸ್ವ- ಗೃಹದಿಂದ ಬೋಳೂರು ರುದ್ರಭೂಮಿಗೆ ಅಂತಿಮೆ ಯಾತ್ರೆ ನಡೆಯಲಿದೆ.

Continue Reading