DAKSHINA KANNADA
ಭಯೋತ್ಪಾದನೆ ಮಾಡುವ ಪಿಎಫ್ಐ ಗೆ ಮುಕ್ತ ಅವಕಾಶ ಕೊಡುವ ಮಾತನಾಡುತ್ತಿದೆ ಕಾಂಗ್ರೆಸ್: ಯೋಗಿ ಆದಿತ್ಯನಾಥ್
ಪುತ್ತೂರು, ಮೇ 06: ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪುತ್ತೂರಿಗೆ ಆಗಮಿಸಿದ್ದು, ಮಹಾಲಿಂಗೇಶ್ವರ ದೇವಾಲಯದ ಬಳಿಯಿಂದ ರೋಡ್ ಶೋ ನಡೆಸಿ ಆಶಾ ತಿಮ್ಮಪ್ಪ ಪರ ಮತಯಾಚನೆ ಮಾಡಿದ್ದಾರೆ.
ಪುತ್ತೂರಿನಲ್ಲಿ ಯೋಗಿ ಆದಿತ್ಯನಾಥ ರೋಡ್ ಶೋ ನಡೆಸಿ ಕನ್ನಡದಲ್ಲಿ ಭಾಷಣ ಆರಂಭಿಸಿ ಪುತ್ತೂರಿನ ಮುತ್ತಿನಂತ ಜನರಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಹೇಳಿದ್ದಾರೆ. ಪುತ್ತೂರಿನ ನಿಮ್ಮೆಲ್ಲರಿಗೂ ಹೃದಯದ ಅಭಿನಂದನೆ, ನಾನು ಮರ್ಯಾದಾ ಪುರುಷೋತ್ತಮ ರಾಮನ ಜನ್ಮಭೂಮಿಯಿಂದ ಹನುಮಂತನ ಜನ್ಮಭೂಮಿಯಾದ ಕರ್ನಾಟಕಕ್ಕೆ ಬಂದಿದ್ದೆನೆ.
ಸಾವಿರ ವರ್ಷದ ಹಿಂದೆ ರಾಮನ ವನವಾಸದ ಸಮಯದಲ್ಲಿ ರಾಮನ ಅಂತಿಮ ದಿನದ ವರೆಗೆ ಇದ್ದವನು ಹನುಮಂತ, ಅಯೋಧ್ಯಯಲ್ಲಿ ರಾಮ ಮಂದಿರ ನಿರ್ಮಾಣ ಆಗುತ್ತಿದೆ, ಕರ್ನಾಟಕ ಸರಕಾರ ಕೂಡಾ ಅಂಜನೇಯನ ದೇವಸ್ಥಾನ ಮಾಡುತ್ತಿದೆ.
ಕಾಂಗ್ರೇಸ್ ಜನರ ನಂಬಿಕೆಯ ಮೇಲೆ ಪ್ರಹಾರ ಮಾಡುತ್ತಿದೆ, ರಾಮ ಕಾಲ್ಪನಿಕ ಎಂದು ಕಾಂಗ್ರೆಸ್ ಹೇಳಿಕೊಂಡು ಬಂದಿದೆ, ಕಾಂಗ್ರೇಸ್ ಹನುಮಂತನ ನಾಡಿನಲ್ಲಿ ಭಜರಂಗದಳ ನಿಶೇಧದ ಬಗ್ಗೆ ಹೇಳುತ್ತಿದೆ. ಭಯೋತ್ಪಾದನೆ ಮಾಡುವ ಪಿಎಫ್ಐ ಗೆ ಮುಕ್ತ ಅವಕಾಶ ಕೊಡುವ ಮಾತನಾಡುತ್ತಿದೆ, ರಾಮಜನ್ಮಭೂಮಿ ಅಂದೋಲನದಲ್ಲಿ ಸಮಯದಲ್ಲಿ ಒಂದು ಜೈಕಾರ ಹಾಕಿದ್ದೆವು, ಅದೇ ಜೈಕಾರವನ್ನು ಇಂದು ನನ್ನ ಜೊತೆ ನೀವೆಲ್ಲರೂ ಹಾಕಿ ಜೈ ಕಾರ ಭಜರಂಗಿ ಹರ ಹರ ಎಂದಿದ್ದಾರೆ.
ಭಜರಂಗದಳ ದೇಶದ ಸಾಂಸ್ಕೃತಿಕ ಸಂಘಟನೆ, ದೇಶದ ಸಂಸ್ಕೃತಿಯ ಜೊತೆ ಬೆಸೆದುಕೊಂಡಿರುವ ಕೊಂಡಿರುವ ಸಂಘಟನೆ, ಮೋದಿ ನೇತೃತ್ವದಲ್ಲಿ ಭಾರತ ಜಗತ್ತಿನಲ್ಲೇ ಪ್ರಬಲ ರಾಷ್ಟ್ರವಾಗಿ ಮೂಡಿ ಬಂದಿದೆ. ಕರ್ನಾಟಕದಲ್ಲಿ ಯಡಿಯೂರಪ್ಪ,ಬಸವರಾಜ ಬೊಮ್ಮಾಯಿ ಅಭಿವೃದ್ಧಿ ಮಾಡುತ್ತಿದ್ದಾರೆ, ಆದರೆ ಕಾಂಗ್ರೆಸ್, ಜೆಡಿಎಸ್ ಅಭಿವೃದ್ಧಿ ಗೆ ತಡೆಯೊಡ್ಡುತ್ತಿದೆ.
ಟೀಂ ಇಂಡಿಯಾದ ಲೀಡರ್ ಆದ ಮೋದಿ ಜೊತೆ ಕರ್ನಾಟಕ ರಾಜ್ಯದ ಜನತೆ ಆಶೀರ್ವಾದ ನಿಲ್ಲಬೇಕಿದೆ. ರಾಜ್ಯದಲ್ಲಿ ಮತ್ತೆ ಭಾರತೀಯ ಜನತಾ ಪಕ್ಷಕ್ಕೆ ಆಶೀರ್ವಾದ ಮಾಡಬೇಕಿದೆ. ಪುತ್ತೂರಿನ ಜನತೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಜೊತೆ ಜನತೆ ಕೈಜೋಡಿಸಬೇಕು ಎಂದು ಯೋಗಿ ಆದಿತ್ಯನಾಥ ಹೇಳಿದ್ದಾರೆ.