LATEST NEWS
ಕಾಂಗ್ರೇಸ್ ಕಚೇರಿಯಲ್ಲಿ ರಮಾನಾಥ ರೈ ಮತ್ತು ಯುವ ಕಾಂಗ್ರೇಸ್ ಕಾರ್ಯಕರ್ತರ ನಡುವೆ ವಾಗ್ವಾದ
ಮಂಗಳೂರು ಜನವರಿ 18: ಗಣರಾಜ್ಯೋತ್ಸವ ಪರೇಡ್ ನಲ್ಲಿ ನಾರಾಯಣ ಗುರುಗಳ ಟ್ಯಾಬ್ಲೋ ವನ್ನು ನಿರಾಕರಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಕಾಂಗ್ರೇಸ್ ಕಚೇರಿಯಲ್ಲಿ ಹೋರಾಟ ಸ್ವರೂಪದ ಬಗ್ಗೆ ನಡೆದ ಸಭೆಯಲ್ಲಿ ಹಿರಿಯ ಮತ್ತು ಕಿರಿಯ ನಾಯಕರ ನಡುವೆ ಮಾತಿನ ಚಕಮಕಿ ನಡೆದು ಹೊಯ್ ಕೈ ಹಂತಕ್ಕೆ ಮುಟ್ಟಿದೆ.
ಇಂದು ಬೆಳಿಗ್ಗೆ ಬ್ರಹ್ಮಶ್ರೀ ನಾರಾಯಣ ಗುರು ವಿಚಾರವಾಗಿ ಪಾದಯಾತ್ರೆ ನಿಗದಿಯಾಗಿತ್ತು. ಈ ವೇಳೆ ಪಾದಯಾತ್ರೆಗೆ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಅನುಮತಿ ಪಡೆಯದೇ ಇದನ್ನು ಮಾಡಲು ಮುಂದಾಗಿದ್ದು, ಕೆಲವು ಹಿರಿಯ ನಾಯಕರನ್ನು ಅಸಮಧಾನಕ್ಕೆ ಒಳಪಡಿಸಿದೆ ಎಂದು ಹೇಳಲಾಗಿದೆ. ಇದೇ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ.
ರಮಾನಾಥ ರೈಗಳು ವೇದಿಕೆಯಲ್ಲಿ ನಿಂತು ಮಾತನಾಡುತ್ತಿದ್ದ ವೇಳೆ ಮೂಲ್ಕಿ ವಲಯದ ನಾಯಕರೊಬ್ಬರು ರೈಗಳನ್ನು ನಿಂದಿಸಿ ಮಾತನಾಡಿದ್ದೇ ಈ ವಿವಾದಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಈ ವೇಳೆ ಹಿರಿಯ ನಾಯಕರಾದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಬಿ ರಮಾನಾಥ ರೈ, ಜೆ ಆರ್ ಲೋಬೋ, ಮಂಜುನಾಥ ಭಂಡಾರಿ, ಯು ಟಿ ಖಾದರ್ ಅವರ ಉಪಸ್ಥಿತಿಯಲ್ಲೇ ಈ ಬಗ್ಗೆ ಯುವ ನಾಯಕರೊಂದಿಗೆ ಮಾತಿನ ಚಕಮಕಿ ನಡೆದು ಬಳಿಕ ಸಂಧಾನ ಮಾಡಲಾಗಿದೆ.