Connect with us

KARNATAKA

ಆತ್ಮಗಳ ಜೊತೆ ಮಾತಾಡುತ್ತೇನೆಂದು ಮನೆ ಬಿಟ್ಟು ತೆರಳಿದ್ದ ಬಾಲಕಿ 78 ದಿನಗಳ ಬಳಿಕ ಗುಜರಾತ್ ನಲ್ಲಿ ಪತ್ತೆ

ಬೆಂಗಳೂರು ಜನವರಿ 18: ತಾನು ಆತ್ಮಗಳೊಂದಿಗೆ ಮಾತನಾಡುವುದನ್ನು ಕಲಿಯುತ್ತೇನೆ ಎಂದು ಮನೆ ಬಿಟ್ಟಿದ್ದ ಅಪ್ರಾಪ್ತ ಯುವತಿ 78 ದಿನಗಳ ಬಳಿಕ ಗುಜರಾತ್ ನ ಸೂರತ್ ನಲ್ಲಿ ಪತ್ತೆಯಾಗಿದ್ದಾಳೆ.

ಶಮಾನಿಸಂ ಅಥವಾ ಆತ್ಮಗಳೊಂದಿಗೆ ಮಾತನಾಡುವುದು ಎನ್ನುವುದು ಧಾರ್ಮಿಕ ಆಚರಣೆಯನ್ನು ಅಭ್ಯಾಸ ಮಾಡಲು 12ನೇ ತರಗತ ಪಾಸಾಗಿದ್ದ ಯುವತಿ ಅಕ್ಟೋಬರ್ 31 ರಂದು ಮನೆಬಿಟ್ಟು ತೆರಳಿದ್ದಳು. ಆಕೆಯ ಪೋಷಕರು ಆಧ್ಯಾತ್ಮಿಕ ಜೀವನ ತರಬೇತುದಾರರಾಗಿದ್ದು, ಸೈಕೆಡೆಲಿಕ್ ಶಿಕ್ಷಣತಜ್ಞರಿಂದ ಪ್ರಭಾವಿತಳಾಗಿದ್ದರು. ಯುವತಿ ಶಾಮನಿಸಂ ಅನ್ನು ಅಭ್ಯಾಸ ಮಾಡುವ ಬಯಕೆಯ ಬಗ್ಗೆ ತನ್ನ ತಂದೆ-ತಾಯಿಯ ಜೊತೆ ಮಾತನಾಡಿದ್ದಳು.


ನಂತರ ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಿದ್ದಳು, ನಂತರ ಈ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು, ಆಕೆಯ ಪೋಷಕರು ಮಗಳ ಪತ್ತೆಯಾಗಿ ಪೊಲೀಸ್ ದೂರಿನ ಜೊತೆ ಸಾಮಾಜಿಕ ಜಾಲತಾಣದಲ್ಲೂ ಪ್ರಯತ್ನಿಸಿದ್ದರು. ತಮ್ಮ ಮಗಳ ನಾಪತ್ತೆಯ ಹಿಂದೆ ಮಾಟ-ಮಂತ್ರ ದ ಕೈವಾಡವಿದೆ ಎಂದು ಹೆತ್ತವರು ಅನುಮಾನ ವ್ಯಕ್ತಪಡಿಸಿದ್ದರು. ಆದರೀಗ ಅನಾಥಾಶ್ರಮದಲ್ಲಿ ಈಕೆ ಪತ್ತೆಯಾಗಿದ್ದು ಎಲ್ಲಾ ಅನುಮಾನಗಳಿಗೆ ತೆರೆ ಬಿದ್ದಿದೆ.

ಶಮಾನಿಸಂಗೆ ಆಕರ್ಷಿತಳಾಗಿ ಯುವತಿ ನಾಪತ್ತೆ ಪ್ರಕರಣದಲ್ಲಿ ಯುವತಿಯನ್ನು ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಪತ್ತೆ ಮಾಡಿದ್ದಾರೆ. 2 ತಿಂಗಳ ಹಿಂದೆ ಮನೆಯಿಂದ ಯುವತಿ ನಾಪತ್ತೆಯಾಗಿದ್ದರು. ಗುಜರಾತ್ ಆಶ್ರಮದಲ್ಲಿದ್ದ ಅವರನ್ನು ಆಶ್ರಮದಿಂದ ಕರೆತಂದು ಪೊಲೀಸರು ಪೋಷಕರಿಗೆ ಒಪ್ಪಿಸಿದ್ದಾರೆ. ಶಾಮನಿಸಂನಲ್ಲಿ ಆಸಕ್ತಿ ಹೊಂದಿದ್ದ ಯುವತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮನೆ ಬಿಟ್ಟು ಹೋಗಿದ್ದಾಗಿ ಯುವತಿ ಹೇಳಿಕೆ ನೀಡಿದ್ದಾರೆ. ಇದೀಗ ಪೊಲೀಸರು ಗುಜರಾತ್​ನಿಂದ ಕರೆತಂದು ಪೋಷಕರ ಬಳಿ ಬಿಟ್ಟಿದ್ದಾರೆ.

Advertisement
Click to comment

You must be logged in to post a comment Login

Leave a Reply