LATEST NEWS
ಮಂಗಳೂರು – ಕಂಪೌಂಡ್ ಗೊಡೆ ಕುಸಿದ ಪರಿಣಾಮ 16ಕ್ಕೂ ಅಧಿಕ ದ್ವಿಚಕ್ರ ವಾಹನಕ್ಕೆ ಹಾನಿ

ಮಂಗಳೂರು ಜುಲೈ 17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಮಂಗಳೂರಿನಲ್ಲಿ ಮಳೆ ಅವಾಂತರವನ್ನೆ ಸೃಷ್ಠಿಸಿದೆ. ಕಾಂಪೌಂಡ್ ಕುಸಿದು ಬಿದ್ದು 16 ಬೈಕ್ ಒಂದು ಇನ್ನೋವಾ ಕಾರಿಗೆ ಹಾನಿಯಾದ ಘಟನೆ ಮೆರಿಹಿಲ್ ಬಳಿ ಇರುವ ಕೆನರಾ ವಿಕಾಸ್ ಕಾಲೇಜಿನ ಬಳಿ ನಡೆದಿದೆ.
ಮಂಗಳೂರಿನಲ್ಲಿ ಮಳೆ ಅಬ್ಬರ ಜೋರಾಗಿದೆ. ಮಳೆ ಅವಾಂತರಕ್ಕೆ ಮಂಗಳೂರಿನ ಮೇರಿಹಿಲ್ ಬಳಿ ಇರುವ ಕೆನರಾ ವಿಕಾಸ್ ಕಾಲೇಜಿನ ಕಂಪೌಂಡ್ ಗೊಡೆ ಕುಸಿದು ಬಿದ್ದಿದೆ. ಕಂಪೌಂಡ್ ಬಿದ್ದ ಪರಿಣಾಮ 16ಕ್ಕೂ ಅಧಿಕ ದ್ವಿಚಕ್ರ ವಾಹನ ಹಾಗೂ ಒಂದು ಇನ್ನೋವಾ ಕಾರು ಜಖಂಗೊಂಡಿದೆ.

ಬ್ರಾಮರಿ ಆಟೋ ವರ್ಕ್ಸ್ ಗ್ಯಾರೇಜ್ ಗೆ ರಿಪೇರಿಗೆ ಬಂದಿರುವ ದ್ವಿಚಕ್ರವಾಹನಗಳನ್ನು ಕಂಪೌಂಡ್ ಬದಿಯಲ್ಲಿ ನಿಲ್ಲಿಸಲಾಗಿದ್ದು, ಸುಮಾರು 10 ಅಡಿ ಎತ್ತರದ ಕಂಪೌಂಡ್ ಬಿದ್ದ ಕಾರಣ ಸುಮಾರು 16ಕ್ಕೂ ಅಧಿಕ ವಾಹನಗಳು ಜಖಂಗೊಂಡಿದೆ. ದ್ವಿಚಕ್ರ ವಾಹನಗಳ ಜೊತೆ ಒಂದು ಇನ್ನೊವಾ ಕಾರು ಕೂಡ ಜಖಂಗೊಂಡಿದೆ.