LATEST NEWS
ಚೌಕಿದಾರ್ ಸ್ಟಿಕ್ಕರ್ ವಿರುದ್ದ ಅಧಿಕಾರಿಗಳ ಕಿರುಕುಳ ಚುನಾವಣಾ ಆಯೋಗಕ್ಕೆ ದೂರು – ಸುರೇಶ್ ಕುಮಾರ್

ಚೌಕಿದಾರ್ ಸ್ಟಿಕ್ಕರ್ ವಿರುದ್ದ ಅಧಿಕಾರಿಗಳ ಕಿರುಕುಳ ಚುನಾವಣಾ ಆಯೋಗಕ್ಕೆ ದೂರು – ಸುರೇಶ್ ಕುಮಾರ್
ಮಂಗಳೂರು ಎಪ್ರಿಲ್ 10: ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಚೌಕಿದಾರ್ ಆಂದೋಲನ ನಡೆಸುತ್ತಿದ್ದವರ ಮೇಲೆ ಅಧಿಕಾರಿಗಳು ವಿನಾ ಕಾರಣ ಕಿರುಕುಳ ನೀಡಿ ಅಡ್ಡಗಾಲು ಹಾಕುತ್ತಿದ್ದಾರೆ.
ಇಂತಹ ಅಧಿಕಾರಿಗಳ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುತ್ತಿದೆ ಎಂದು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ನಾಯಕ ಸುರೇಶ್ ಕುಮಾರ್ ಹೇಳಿದ್ದಾರೆ.

ಚುನಾವಣಾ ಪ್ರಚಾರಕ್ಕಾಗಿ ಮಂಗಳೂರಿಗೆ ಆಗಮಿಸದ್ದ ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಚೌಕಿದಾರ್ ಶೇರ್ ಹೇ ಎಂಬ ಪದ ದೇಶಾದಾದ್ಯಂತ ಆಂದೋಲನವಾಗಿ ರೂಪುಗೊಂಡಿದೆ.
ಇದರಿಂದ ಪ್ರತಿಪಕ್ಷಗಳಿಗೆ ಇರಿಸುಮುರುಸಾಗಿದೆ. ಕೆಲ ಅಧಿಕಾರಿಗಳೂ ಇದನ್ನೆ ನೆಪವಾಗಿಟ್ಟು ಜಿಲ್ಲೆ ಹಾಗೂ ರಾಜ್ಯದಲ್ಲಿ ಕಿರುಕುಳ ನೀಡುತ್ತಿರುವುದು ಪಕ್ಷದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಆ ಅಧಿಕಾರಿಗಳ ವಿರುದ್ದ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದರು.