ನ್ಯಾಯ ಮೂಲಕ ಬಡವರಿಗೆ ಮಾಡಿದ ಅನ್ಯಾಯ ಒಪ್ಪಿಕೊಂಡ ಕಾಂಗ್ರೇಸ್ – ಬಿಜೆಪಿ ವಕ್ತಾರೆ ಮಾಳವಿಕಾ

ಮಂಗಳೂರು ಎಪ್ರಿಲ್ 11: ಕಾಂಗ್ರೇಸ್ ಪಕ್ಷ ಈಗ ನ್ಯಾಯ ಯೋಜನೆ ಘೋಷಣೆ ಮಾಡುವ ಮೂಲಕ ಪರೋಕ್ಷವಾಗಿ 70 ವರ್ಷಗಳಲ್ಲಿ ಬಡವರಿಗೆ ಅನ್ಯಾಯ ಮಾಡಿದ್ದೇವೆಂದು ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರೆ, ಚಿತ್ರನಟಿ ಮಾಳವಿಕಾ ಹೇಳಿದ್ದಾರೆ.

ಕಾಂಗ್ರೆಸ್ 1971ರಲ್ಲಿ ಗರೀಬಿ ಹಠಾವೋ ಘೋಷಣೆ ಮಾಡಿದ್ದರು, ಈಗ ಬಡತನ ನಿರ್ಮೂಲನೆಗೆಂದು ಮತ್ತೆ ನ್ಯಾಯದ ಘೋಷಣೆ ಮಾಡಿದ್ದಾರೆ. ಹಾಗಾದ್ರೆ ಈವರೆಗೆ ಕಾಂಗ್ರೆಸ್ ಬಡವರಿಗೆ ಮಾಡಿದ್ದು ಅನ್ಯಾಯವೇ ? ಎಂದು ಅವರು ಕಾಂಗ್ರೇಸ್ ನ್ನು ಪ್ರಶ್ನಿಸಿದ್ದಾರೆ.

ಅಲ್ಲದೆ ಕಾಂಗ್ರೇಸ್ ಪಕ್ಷ ಈಗ ನ್ಯಾಯ ಯೋಜನೆಯನ್ನು ಘೋಷಣೆ ಮಾಡುವ ಮೂಲಕ ಪರೋಕ್ಷವಾಗಿ 70 ವರ್ಷಗಳಲ್ಲಿ ಅನ್ಯಾಯ ಮಾಡಿದ್ದೇವೆಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಕಾಂಗ್ರೇಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 124 ಎ ಕಲಂ ರದ್ದುಪಡಿಸುವ ಭರವಸೆ ನೀಡಿದ್ದಾರೆ.  ಇದರಿಂದ ಪ್ರತ್ಯೇಕತಾವಾದಿಗಳಿಗೆ ಕಾಂಗ್ರೆಸ್ ಬೆಂಬಲಿಸುವ ಸೂಚನೆ ನೀಡಿದ ಹಾಗೆ ಆಗಿದೆ ಎಂದರು .

ಲೋಕಸಭಾ ಚುನಾವಣೆ ಹೊತ್ತಲ್ಲಿ ಅಲ್ಪಸಂಖ್ಯಾತ ಅಪರಾಧಿಗಳನ್ನು ಬಿಡುಗಡೆ ಮಾಡಲು ಕಾಂಗ್ರೇಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರ ಹೊರಟಿದ್ದು, ಈ ಮೂಲಕ ಸಿಎಂ ಕುಮಾರಸ್ವಾಮಿ ಜನರಿಗೆ ಯಾವ ಸಂದೇಶ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು.