LATEST NEWS
ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ವಿರುದ್ದ ಅಪಪ್ರಚಾರ – ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು

ಮಂಗಳೂರು ಸೆಪ್ಟೆಂಬರ್ 5: ಭಜರಂಗದಳ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಯನ್ನು ಬಳಸಿ ಅಪಪ್ರಚಾರ ನಡೆಸುತ್ತಿರುವವರ ವಿರುದ್ದ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲಸದ ಆಮಿಷ ನೀಡಿ ಅಮಾಯಕ ಹಿಂದೂ ಯುವತಿಯನ್ನು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಯುವಕರಿಗೆ ಒಪ್ಪಿಸಿ ಅತ್ಯಾಚಾರ ಮಾಡಿಸಲಾಗುತ್ತಿದೆ ಎಂದು ನಕಲಿ ಖಾತೆಯೊಂದರಲ್ಲಿ ಹಿಂದೂ ಯುವತಿ ಸೋಗಿನಲ್ಲಿ ಅಪಪ್ರಚಾರ ಮಾಡಲಾಗಿತ್ತು. ಈ ಹಿನ್ನಲೆ ಪುನಿತ್ ಎಂಬುವರು ಕದ್ರಿ ಪೊಲೀಸ್ ಠಾಣೆಯಲ್ಲಿ ನಕಲಿ ಪೇಸ್ ಬುಕ್ ಖಾತೆ ವಿರುದ್ದ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಇನ್ನು ನಕಲಿ ಫೇಸ್ ಬುಕ್ ನ ಬರಹಕ್ಕೆ ಬಜರಂಗದಳ ಮುಖಂಡ ಶರಣ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಮಾನಹಾನಿ ಉದ್ದೇಶದಿಂದಲೇ ಈ ಅಪಪ್ರಚಾರ ಮಾಡಲಾಗಿದೆ ತಿಳಿಸಿದ್ದಾರೆ.
ಪೊಲೀಸ್ ಇಲಾಖೆ ಈ ಬಗ್ಗೆ ಕೂಡಲೇ ಅಪಪ್ರಚಾರ ನಡೆಸುತ್ತಿರುವವರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಸಮಾಜದಲ್ಲಿ ಶಾಂತಿ ಕದಡುವ ಇಂತಹ ಪೋಸ್ಟ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಹಿಂದೂ ಸಂಘಟನೆಗಳು ನೀಡಿವೆ.