LATEST NEWS
ದ್ವೇಷ ಭಾಷಣ – ಶರಣ್ ಪಂಪ್ವೆಲ್ ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ತುಮಕೂರು ನ್ಯಾಯಾಲಯ..!!
ತುಮಕೂರು ಫೆಬ್ರವರಿ 18: ತುಮಕೂರಿನಲ್ಲಿ ಮಾಡಿದ ಜನವರಿ 28 ರಂದು ಮಾಡಿದ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಎಚ್ ಪಿ ನಾಯಕ ಶರಣ್ ಪಂಪ್ವೆಲ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನನ್ನು ತುಮಕೂರು ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದ್ದು, ಶರಣ್ ಪಂಪ್ವೆಲ್ ಬಂಧಿಸುವ ನಿರ್ಧಾರ ಜಿಲ್ಲಾ ಪೊಲೀಸರಿಗೆ ಬಿಟ್ಟಿದೆ.
ಫೆಬ್ರವರಿ 14 ರಂದು ವಿಎಚ್‌ಪಿ ಕಾರ್ಯದರ್ಶಿ ಶರಣ್ ಪಂಪ್ವೆಲ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಗೆ ತೆಗೆದುಕೊಂಡ ನ್ಯಾಯಾಲಯ ನಿರೀಕ್ಷಣಾ ಜಾಮೀನನ್ನು ತಿರಸ್ಕರಿಸಿದೆ. ಇನ್ನು ಪ್ರಕರಣದ ಗಂಭೀರತೆಯನ್ನು ನಿರ್ಧರಿಸುವುದು ಪೊಲೀಸರೇ ಎಂದು ಹೇಳಿದೆ. ಅಲ್ಲದೆ ಏಳಕ್ಕಿಂತ ಕಡಿಮೆ ವರ್ಷ ಶಿಕ್ಷೆಗೊಳಗಾಗುವ ಕೆಲವು ಪ್ರಕರಣಗಳಲ್ಲಿ ಬಂಧನದ ಅವಶ್ಯಕತೆ ಇರುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಹೀಗಾಗಿ ಶರಣ್ ಪಂಪ್ವೆಲ್ ಬಂಧಿಸುವ ಬಗ್ಗೆ ಪೊಲೀಸ್ ರು ನಿರ್ಧರಿಸಬಹುದು ಎಂದು ಹೇಳಿದೆ.
ತುಮಕೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿಎಚ್‌ಪಿ ಕಾರ್ಯದರ್ಶಿ ಶರಣ್ ಪಂಪ್‌ವೆಲ್ 2002 ರಲ್ಲಿ ಗುಜರಾತ್‌ನಲ್ಲಿ ನಡೆದ ಮುಸ್ಲಿಮರ ಹತ್ಯೆಗಳು ಮತ್ತು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಮುಸ್ಲಿಂ ಯುವಕನ ಹತ್ಯೆಯನ್ನು ಹಿಂದೂಗಳ ಪ್ರದರ್ಶನ ಎಂದು ಪ್ರತಿಪಾದಿಸಿದರು. ಈ ಹಿನ್ನಲೆ ತುಮಕೂರು ನಗರ ಪೊಲೀಸರು, ನಿವಾಸಿ ಸೈಯದ್ ಬುರ್ಹಾನುದ್ದೀನ್ ಎಂಬುವವರ ದೂರಿನ ಆಧಾರದ ಮೇಲೆ ಜನವರಿ 30 ರಂದು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 295 ಎ ಅಡಿಯಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದಕ್ಕಾಗಿ ಪ್ರಕರಣ ದಾಖಲಿಸಿದರು.
ಇದೀಗ ಶರಣ್ ಪಂಪ್ವೆಲ್ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿರುವ ನ್ಯಾಯಾಲಯ ಜಾಮೀನು ನೀಡಿದರೆ ಸಾರ್ವಜನಿಕ ಶಾಂತಿಯನ್ನು ಹಾಳುಮಾಡಲು ಪಂಪ್‌ವೆಲ್ ಸಾರ್ವಜನಿಕವಾಗಿ ಮತ್ತೆ ಭಾಷಣ ಮಾಡುವ ಸಾಧ್ಯತೆಗಳಿವೆ” ಎಂದು ಹೇಳಿದೆ. ಇನ್ನು ಶರಣ್ ಪಂಪ್ವೆಲ್ ಅವರ ವಿಚಾರಣೆ ನಡೆಸಿದ ಬಳಿಕ ಅವರನ್ನು ಬಂಧಿಸುವ ಅಗತ್ಯವಿದೆಯೇ ಎಂದು ನಿರ್ಧರಿಸುವ ಅಧಿಕಾರಿವನ್ನು ತುಮಕೂರು ಪೊಲೀಸರಿಗೆ ನೀಡಿದೆ.