Connect with us

LATEST NEWS

ಜಾಥಾದಲ್ಲಿ ಸಾಮಾಜಿಕ ಅಂತರಕ್ಕೆ ಉಡುಪಿಯಲ್ಲಿ ಬಳಕೆಯಾಯ್ತು ಕಲರ್ ಕಲರ್ ಕೊಡೆಗಳು

ಉಡುಪಿ ಜೂನ್ 18: ರಾಜ್ಯದಲ್ಲೇ ಅತೀ ಹೆಚ್ಚು ಕೊರೊನಾ ಸೋಂಕಿತರು ಇರುವ ಉಡುಪಿಯಲ್ಲಿ ಮಾಸ್ಕ್ ಡೇಯನ್ನು ವಿಭಿನ್ನವಾಗಿ ಆಚರಿಸಲಾಯ್ತು. ಸಾಮಾಜಿಕ ಅಂತರಕ್ಕೆ ಕೊಡೆ ಬಳಕೆಯ ಜಾಗೃತಿಯನ್ನು ಉಡುಪಿ ನಗರಸಭೆ ಆಯೋಜಿಸಿದ್ದು, ಅಭಿಯಾನದಲ್ಲಿ ಪಾಲ್ಗೊಂಡವರಿಗೆ ಬಣ್ಣ ಬಣ್ಣದ ಕೊಡೆ ನೀಡಲಾಯ್ತು.

ನೂರಾರು ಜನ ಉಡುಪಿ ನಗರದ ಪ್ರಮುಖ ರಸ್ತೆಗಳಲ್ಲಿ ಮಾಸ್ಕ್ ಧರಿಸುವ ಕುರಿತಾದ ಜನಜಾಗೃತಿ ಮೂಡಿಸಿದರು. ರಸ್ತೆಯಲ್ಲಿ ತೆರಳುತ್ತಾ ಮಾಸ್ಕ್ ಇಲ್ಲದವರ ಬಳಿ ವಿನಂತಿ ಮಾಡಿದರು. ಕಲರ್ ಕೊಡೆ ಜಾಥಾದ ನೇತೃತ್ವವನ್ನು ಉಡುಪಿ ಡಿಸಿ ಜಿ. ಜಗದೀಶ್ ವಹಿಸಿದ್ದರು. ಎಎಲ್ ಎ ರಘುಪತಿ ಭಟ್, ಜಿಲ್ಲಾಡಳಿತ, ನಗರಸಭೆ ಅಧಿಕಾರಿಗಳು ಪಾಲ್ಗೊಂಡರು. ಮಾಸ್ಕ್ ಧರಿಸಬೇಕಾದ ಅಗತ್ಯತೆ, ಸಾಮಾಜಿಕ ಅಂತರದ ಕುರಿತು ಜಾಗೃತಿ ಈ ಸಂದರ್ಭದಲ್ಲಿ ಮೂಡಿಸಲಾಯ್ತು. ಜಿಲ್ಲಾಡಳಿತದ ಜಾಥಾ ಜನರನ್ನು ಸೆಳೆದಿದೆ.

[tps_header][/tps_header]

ಶಾಸಕ ರಘುಪತಿ ಭಟ್ ಈ ಸಂದರ್ಭದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚು ಇದೆ. ಅದರ ಜೊತೆಗೆ ಡಿಸ್ಚಾರ್ಜ್ ಆಗುತ್ತಿರುವ ಸಂಖ್ಯೆಯಲ್ಲಿಯೂ ಉಡುಪಿ ಮುಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *