Connect with us

LATEST NEWS

ದಕ್ಷಿಣಕನ್ನಡ 400 ಗಡಿ ದಾಟಿದ ಕೊರೊನಾ ಪ್ರಕರಣ.. ಇಂದು ಮತ್ತೆ 23 ಮಂದಿಗೆ ಕೊರೊನಾ

ಮಂಗಳೂರು ಜೂನ್ 18: ದಕ್ಷಿಣಕನ್ನಡಕ್ಕೆ ಇಂದು ಸೌದಿ ಸಂಕಷ್ಟ ತಂದೊಡ್ಡಿದ್ದು, ಇಂದು ಜಿಲ್ಲೆಯಲ್ಲಿ 23 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇಂದು ದೃಢಪಟ್ಟ ಪ್ರಕರಣಗಳಲ್ಲಿ 21 ಪ್ರಕರಣಗಳು ಸೌದಿ ಅರೇಬಿಯಾದಿಂದ ಜಿಲ್ಲೆಗೆ ಆಗಮಿಸಿದವರಾಗಿದ್ದಾರೆ.


ಇಂದಿನ 23 ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 401 ಆಗಿದ್ದು, ಇಂದು 6 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲೆಯಲ್ಲಿ 242 ಸಕ್ರಿಯ ಕೊರೊನಾ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Facebook Comments

comments