LATEST NEWS
ಮಂಗಳೂರು ನಗರದಲ್ಲಿ ಕಾಲೇಜ್ ಯುನಿಫಾರಂ ನಲ್ಲಿ ಯುವತಿಯರ ಭಿಕ್ಷಾಟನೆ
ಮಂಗಳೂರು ನಗರದಲ್ಲಿ ಕಾಲೇಜ್ ಯುನಿಫಾರಂ ನಲ್ಲಿ ಯುವತಿಯರ ಭಿಕ್ಷಾಟನೆ
ಮಂಗಳೂರು ಅಗಸ್ಟ್ 2 : ಕಾಲೇಜು ಹುಡುಗಿಯರ ತರ ಬಟ್ಟೆ ಹಾಕಿಕೊಂಡು ಬಿಕ್ಷೆ ಬೇಡುತ್ತಿರುವವರ ತಂಡವೊಂದು ಮಂಗಳೂರಿನಲ್ಲಿ ಸಕ್ರಿಯವಾಗಿದ್ದು, ಇಂತಹವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಚ್ಚುಕಟ್ಟಾಗಿ ಬಟ್ಟೆ ಧರಿಸಿ, ಟೈ ಕಟ್ಟಿ ಕೂದಲಿಗೆ ಬಣ್ಣ ಹಚ್ಚಿ ಮಂಗಳೂರಿನ ಯಾವುದೋ ಕಾಲೇಜಿನ ವಿಧ್ಯಾರ್ಥಿನಿಯರ ತರ ಇರುವ ಇವರು ತಾವು ನೆರೆ ಸಂತ್ರಸ್ಥರೆಂದು ಹೇಳಿ ಮಂಗಳೂರಿನ ನಗರಾದ್ಯಂತ ಭಿಕ್ಷಾಟನೆ ತೊಡಗಿಕೊಂಡಿದ್ದಾರೆ.
ಹಣ ಕೇಳಲು ಬರುವ ಈ ಹುಡುಗಿಯರು ತಾವು ರಾಜಸ್ಥಾನದ ರಾಣಿಪುರದವರು ಎಂದು ಹೇಳಿಕೊಂಡು ತಂಡ ಭಿಕ್ಷಾಟನೆಯಲ್ಲಿ ಸಕ್ರಿಯವಾಗಿದೆ. ತಮ್ಮ ಊರಿನಲ್ಲಿ ನೆರೆ ಬಂದಿದ್ದು, ಆಸ್ತಿ ಪಾಸ್ತಿ ಕಳೆದುಕೊಂಡಿದ್ದೇವೆ , ಆಹಾರ, ಬಟ್ಟೆ ಬರೆ ಇಲ್ಲದೆ ಸಂತ್ರಸ್ಥರಾಗಿದ್ದು , ಹಣ ಸಹಾಯ ಮಾಡಿ ಎಂದು ಝೆರಾಕ್ಸ್ ಪ್ರತಿಯೊಂದನ್ನು ಹಿಡಿದು ಮಂಗಳೂರು ನಗರದೆಲ್ಲಡೆ ತಿರುಗಾಡುತ್ತಾ ಇದ್ದಾರೆ. ಹೆಚ್ಚಾಗಿ ಕಾಲೇಜು ಯುವಕ ಯುವತಿಯರು ಇರುವ ಸ್ಥಳಗಳಲ್ಲಿ ಕಾಣ ಸಿಗುವ ಇವರು ನೆರೆ ಸಂತ್ರಸ್ಥರು ಎಂದು ಭಿಕ್ಷಾಟನೆ ಮಾಡುತ್ತಾರೆ.
ಇದರ ಬಗ್ಗೆ ವಿಡಿಯೋ ಮಾಡಿ ನಗರದ ಸೌರಜ್ ಎನ್ನುವವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಪ್ರಕಟಿಸಿ ಅದರ ಬಗ್ಗೆ ಮಾಹಿತಿ ನೀಡಿದ್ದಾರೆ. ಸೌರಜ್ ಅವರು ಹೇಳುವ ಪ್ರಕಾರ ಸುಮಾರು 8 ತಿಂಗಳಿನಿಂದ ಇಂತಹ ಹಲವಾರು ನಗರದಲ್ಲಿ ತಿರುಗಾಡುತ್ತಿದ್ದಾರೆ. ವ್ಯಕ್ತಿಯೋರ್ವ 100 ರೂಪಾಯಿ ನೀಡಿದರೆ, ತಮ್ಮ ಬಳಿ ಇರುವ ಜೆರಾಕ್ಸ್ ಪ್ರತಿಯಲ್ಲಿ ಅದನ್ನು 1 ಸಾವಿರ ಎಂದು ಬರೆದುಕೊಳ್ಳುತ್ತಾರೆ. ಅದೇ ಪ್ರತಿಯನ್ನು ಇನ್ನೊಬ್ಬ ವ್ಯಕ್ತಿಗೆ ತೋರಿಸಿ ಇನ್ನೂ ಹೆಚ್ಚಿನ ಹಣ ಪಡೆಯಬಹುದು ಎನ್ನುವುದು ಈ ತಂಡದ ಲೆಕ್ಕಾಚಾರ.
VIDEO