KARNATAKA
ಕಾಂತಾರ ಕ್ಲೈಮ್ಯಾಕ್ಸ್ ಸ್ಟೈಲ್ ನಲ್ಲಿ ಕೆಎಲ್ ರಾಹುಲ್ ಸೆಲೆಬ್ರೆಷನ್ – ವಿಡಿಯೋ ವೈರಲ್

ಬೆಂಗಳೂರು ಎಪ್ರಿಲ್ 11: ಐಪಿಎಲ್ ನಲ್ಲಿ ಕೆಎಲ್ ರಾಹುಲ್ ಅಬ್ಬರದ ಅರ್ಧಶತಕದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಗೆದ್ದಿದೆ. ಇಡೀ ಪಂದ್ಯದಲ್ಲಿ ಕೆಎಲ್ ರಾಹುಲ್ ವಿನ್ನಿಂಗ್ ಶಾಟ್ ನಂತರ ಮಾಡಿದ ಸೆಲೆಬ್ರೇಷನ್ ರೀತಿ ಇದೀಗ ವೈರಲ್ ಆಗಿದ್ದು, ಕಾಂತಾರದ ಕ್ಲೈಮಾಕ್ಸ್ ನಲ್ಲಿ ರಿಷಬ್ ಶೆಟ್ಟಿ ರೀತಿಯ ಕೆ ಎಲ್ ರಾಹುಲ್ ಮಾಡಿದ್ದಾರೆ. ತಮ್ಮ ಸಂಭ್ರಮಾಚರಣೆಗೆ ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ಪ್ರೇರಣೆ ಎಂದಿದ್ದಾರೆ.
ಆರ್‌ಸಿಬಿ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರಾಹುಲ್, ಪಂದ್ಯದ ಬಳಿಕ ಮಾತನಾಡುತ್ತಾ, ‘ಈ ಪಿಚ್ ಬಗ್ಗೆ ನನಗಿಂತ ಚೆನ್ನಾಗಿ ಯಾರಿಗೂ ತಿಳಿದಿಲ್ಲ. ಇದು ನನ್ನ ಮೈದಾನ, ಇದು ನನ್ನ ಮನೆ. ನನಗಿಂತ ಚೆನ್ನಾಗಿ ಯಾರಿಗೂ ಇದರ ಬಗ್ಗೆ ತಿಳಿದಿರಲು ಸಾಧ್ಯವಿಲ್ಲ. ಇಲ್ಲಿ ಆಡಲು ತುಂಬಾ ಖುಷಿಯಾಯಿತುʼ ಎಂದು ಹೇಳಿಕೆ ನೀಡಿದ್ದರು.

ಕಾಂತಾರ ಕ್ಲೈಮ್ಯಾಕ್ಸ್‌ನಲ್ಲಿ ನಾಯಕ ಶಿವ (ರಿಷಬ್ ಶೆಟ್ಟಿ ಅಭಿನಯ)ನ ಮೈಮೇಲೆ ದೈವದ ಆವಾಹನೆಯಾಗುತ್ತದೆ. ಆಗ ನಾಯಕ ತನ್ನ ಕೈಯ್ಯಲ್ಲಿದ್ದ ಕತ್ತಿಯಲ್ಲಿ, ನೆಲದ ಮೇಲೆ ವೃತ್ತಾಕಾರವಾಗಿ ಗೀಟು ಎಳೆದು, ಎದೆ ಮುಟ್ಟಿಕೊಂಡು ನಾನಿದ್ದೇನೆ ಎಂಬ ಸಂದೇಶ ಸಾರುತ್ತಾನೆ. ಈ ದೃಶ್ಯವನ್ನೇ ತಲೆಯಲ್ಲಿಟ್ಟುಕೊಂಡು ಕೆ.ಎಲ್.ರಾಹುಲ್ ಚಿನ್ನಸ್ವಾಮಿ ಮೈದಾನದಲ್ಲಿ ಸಂಭ್ರಮಿಸಿರುವುದು. ಬಗ್ಗೆ ಸ್ವತಃ ಕೆ.ಎಲ್.ರಾಹುಲ್ ಸ್ಪಷ್ಟನೆ ನೀಡಿದ್ದು, ‘ಚಿನ್ನಸ್ವಾಮಿ ಕ್ರೀಡಾಂಗಣ ನನಗೆ ವಿಶೇಷವಾದ ಸ್ಥಳ. ನನ್ನ ನೆಚ್ಚಿನ ಕಾಂತಾರ ಚಿತ್ರದ ರೀತಿಯಲ್ಲಿ ನಾನು ಸಂಭ್ರಮಿಸಿದೆʼ ಎಂದು ತಿಳಿಸಿದ್ದಾರೆ.
ಇದನ್ನೇ ಇಲ್ಲಿ RCB jersey ಹಾಕೊಂಡ್ ಮಾಡಿದ್ದಿದ್ರೆ… #KLRahul
RCB management ತೊಗೊನ್ಲಿಲ್ಲ, so ಏನು ಮಾಡಕ್ ಆಗಲ್ಲ #RCBvDC
Copyright owners : @ICC @StarSuvarna pic.twitter.com/VASWGKbbXV— Prajwal B H (@prajwalbh2022) April 11, 2025