LATEST NEWS
ನೀರಿನ ವಿಚಾರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಖಂಡನಾರ್ಹ : ಡಿ ವಿ ಎಸ್
ನೀರಿನ ವಿಚಾರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಖಂಡನಾರ್ಹ : ಡಿ ವಿ ಎಸ್
ಪುತ್ತೂರು, ಡಿಸೆಂಬರ್ 23 : ಮಹಾದಾಯಿ ನೀರು ಹಂಚಿಕೆಯ ವಿಚಾರದಲ್ಲಿ ಬಿಜೆಪಿ ತನ್ನ ನಿಲುವಿಗೆ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಹೇಳಿದ್ದಾರೆ.
ಪುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದ ಗೌಡ ಮಹಾದಾಯಿ ನೀರು ಹಂಚಿಕೆಯ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕಾರ್ ಅವರ ಮನವೊಲಿಸಿ ಮಾತುಕತೆಗೆ ಸಿದ್ಧ ಮಾಡುವ ಪ್ರಮಾಣಿಕ ಪ್ರಯತ್ನ ಬಿಜೆಪಿ ಮಾಡಿದೆ.
ಮುಂದಿನ ದಿನಗಳಲ್ಲಿ ನಡೆಯುವ ಉಭಯ ರಾಜ್ಯಗಳ ಮಾತುಕತೆಯನ್ನು ರಾಜ್ಯಕ್ಕೆ ಅನುಕೂಲಕರವಾಗಿಯೂ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆದರೆ ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಕ್ಷೇಪ ವ್ಯಕ್ತಪಡಿಸುವುದು ಖಂಡನಾರ್ಹವಾಗಿದೆ.
ನೀರಿನ ವಿಚಾರದಲ್ಲೂ ರಾಜಕೀಯ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಟಿದ್ದಾರೆ ಎಂದು ಅರೋಪಿಸಿದರು.
ಲಿಂಗಾಯುತ ಪ್ರತ್ಯೇಕ ಧರ್ಮದ ವಿಚಾರವಾಗಿ ಸಮಿತಿ ರಚಿಸಿರುವುದು ಸರಿಯಾದ ನಿರ್ಧಾರವಲ್ಲ ಎಂದ ಅವರು ಮುಖ್ಯಮಂತ್ರಿಯಾಗಿ ಧರ್ಮವನ್ನು ಒಗ್ಗೂಡಿಸುವ ಬದಲು ಧರ್ಮವನ್ನು ಒಡೆಯುವ ಪ್ರಯತ್ನದಲ್ಲಿ ಸಿದ್ಧರಾಮಯ್ಯರಿದ್ದಾರೆ ಎಂದ ಸದಾನಂದ ಗೌಡ ಧರ್ಮ ಒಡೆದು ರಾಜಕೀಯ ಬೇಳೆ ಬೇಯಿಸುತ್ತೇನೆ ಎನ್ನುವ ಸಿ.ಎಂ.ಯೋಚನೆ ಮುಂದಿನ ದಿನಗಳಲ್ಲಿ ಅವರಿಗೇ ತಿರುಗುಬಾಣವಾಗಲಿದೆಎಂದರು .
ಗುಜರಾತ್ ನಲ್ಲಿ ಗೆದ್ದಂತೆ ರಾಜ್ಯದಲ್ಲೂ ಬಿಜೆಪಿ ಗೆಲ್ಲುವುದು ಶತಸಿದ್ಧ, ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗಲಿದೆ.
ರಾಷ್ಟ್ರೀಯ ನಾಯಕರು ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.