LATEST NEWS
ಪ್ರಧಾನಿ ಕಾರ್ಯಕ್ರಮಕ್ಕೆ ಸಿಎಂ ಆಹ್ವಾನ ಇಲ್ಲದಿರುವುದು ಮೋದಿ ಅವರ ಸಣ್ಣತನ ತೋರಿಸುತ್ತದೆ

ಪ್ರಧಾನಿ ಕಾರ್ಯಕ್ರಮಕ್ಕೆ ಸಿಎಂ ಆಹ್ವಾನ ಇಲ್ಲದಿರುವುದು ಮೋದಿ ಅವರ ಸಣ್ಣತನ ತೋರಿಸುತ್ತದೆ
ಉಡುಪಿ ಫೆಬ್ರವರಿ 17: ಫೆಬ್ರವರಿ 19 ರಂದು ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡದಿರುವುದು ಕೇಂದ್ರದ ಬೇಜವಬ್ದಾರಿ ತಿಳಿಸುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಪ್ರಧಾನಮಂತ್ರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲಿಸುವುದು ಕೇಂದ್ರದ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡದಿರುವುದು ಪ್ರಧಾನಿ ಮೋದಿಯವರ ಸಣ್ಣತನ ತೋರಿಸುತ್ತದೆ ಎಂದು ಆರೋಪಿಸಿದರು.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ಅವರು ಅಮಿತ್ ಶಾ ಈಗಾಗಲೇ ಮೂರ್ನಾಲ್ಕು ಬಾರಿ ರಾಜ್ಯಕ್ಕೆ ಬಂದಿದ್ದಾರೆ. ರಾಜ್ಯಕ್ಕೆ ಬಂದು ಈ ಬಾರಿಯಾದರೂ ಸತ್ಯ ಮಾತನಾಡಲಿ ಎಂದು ಹೇಳಿದರು. ಅಮಿತ್ ಶಾ ಅಮರ ಮಾತು ರಾಜ್ಯದ ಜನರ ಕೋಮು ಭಾವನೆ ಕೆಡಿಸದಿರಲಿ, ಜನರ ಮನಸ್ಸಲ್ಲಿ ವಿಷ ಬೀಜ ಬಿತ್ತು ಕೆಲಸ ಮಾಡಬೇಡಿ ಎಂದು ಹೇಳಿದರು.
ನಮ್ಮ ಸರಕಾರದ ವಿರುದ್ದ ಸುಳ್ಳು ಆರೋಪ ಮಾಡುವುದು ಬೇಡ ಎಂದು ಹೇಳಿದ ಅವರು ರಾಜ್ಯದಲ್ಲಿ ಹೆದರಿಸಿ ಬೆದರಿಸುವ ರಾಜಕಾರಣ ಇಲ್ಲಿ ನಡೆಯುವುದಿಲ್ಲ ಎಂದರು.
ಇತ್ತೀಚೆಗಿನ ರಾಹುಲ್ ಗಾಂಧಿ ಅವರ ರಾಜ್ಯ ಪ್ರವಾಸ ಯಶಸ್ವಿಯಾಗಿದೆ ಎಂದು ಹೇಳಿದ ಅವರು , ರಾಹುಲ್ ಗಾಂಧಿ
ದೇವಸ್ಥಾನ ಹೋಗಲು ಯಾರ ಗುತ್ತಿಗೆ ಬೇಕಾಗಿಲ್ಲ, ದೇವಸ್ಥಾನ, ಮಸೀದಿ ಬಿಜೆಪಿಯವರಿಗೆ ಮಾತ್ರ ಗುತ್ತಿಗೆ ಕೊಟ್ಟಿಲ್ಲ ಎಂದರು. ಹಿಂದೆಯೂ ಕಾಂಗ್ರೆಸ್ ನಾಯಕರು ದೇವಸ್ಥಾನ ಭೇಟಿ ಮಾಡಿದ್ದಾರೆ. ಹಿಂದು ಧರ್ಮವನ್ನು ಬಿಜೆಪಿಗೆ ಗುತ್ತಿಗೆ ಕೊಟ್ಟಿಲ್ಲ ಎಂದು ಹೇಳಿದರು.
ಕರಾವಳಿ ಪ್ರವಾಸ ಮಾಡುವ ವೇಳೆ ಅಮಿತ್ ಶಾ ಮಸೀದಿಗೂ ಭೇಟಿ ಕೊಡಲಿ, ಚರ್ಚ್ ದರ್ಗಾಕ್ಕೂ ಹೋಗಲಿ ಎಂದರು.
ಮೃತರ ಮನೆಗೆ ಅಮಿತ್ ಶಾ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ದಿನೇಶ್ ಗೂಂಡೂರಾವ್, ಬರಿ ಹಿಂದೂ ಗಳ ಮನೆಗೆ ಯಾಕೇ ಹೋಗಬೇಕು , ಮುಸ್ಲಿಂರ ಮನೆಗೂ ಅಮಿತ್ ಶಾ ಹೊಗಲಿ ಎಂದರು. ಸತ್ತವರ ವಿಚಾರದಲ್ಲಿ ಜಾತಿ ಧರ್ಮ ನೋಡಬೇಡಿ ಎಂದು ಕಿವಿ ಮಾತು ಹೇಳಿದರು.