LATEST NEWS
ಸಿಎಂ ಯಡಿಯೂರಪ್ಪ ತಮ್ಮ ಅನುಕೂಲ ನೋಡಿ ವರ್ಗಾವಣೆ ಮಾಡುತ್ತಿದ್ದಾರೆ – ಖಾದರ್ ಆರೋಪ

ಸಿಎಂ ಯಡಿಯೂರಪ್ಪ ತಮ್ಮ ಅನುಕೂಲ ನೋಡಿ ವರ್ಗಾವಣೆ ಮಾಡುತ್ತಿದ್ದಾರೆ – ಖಾದರ್ ಆರೋಪ
ಮಂಗಳೂರು ಅಗಸ್ಟ್ 3: ರಾಜ್ಯದ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಅನುಕೂಲಕ್ಕಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳ ವರ್ಗಾವಣೆ ತೊಡಗಿದ್ದಾರೆ ಎಂದು ಮಾಜಿ ಸಚಿವ ಖಾದರ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಸಂದರ್ಭ ಜಿಲ್ಲೆಯಲ್ಲಿ ಶಾಂತಿ -ಸುವ್ಯವಸ್ಥೆಗೆ ಆದ್ಯತೆ ನೀಡಿ , ಅಕ್ರಮ ಸ್ಕಿಲ್ ಗೇಮ್ ಗ್ಯಾಂಬ್ಲಿಂಗ್ ಗಳಿಗೆ ಕಡಿವಾಣ ಹಾಕಿದ್ದೆ ಅಲ್ಲದೆ ಸ್ಯಾಂಡ್ ಮಾಫಿ ತಡೆಗೆ ಕ್ರಮ ಕೈಗೊಳ್ಳಲಾಗಿತ್ತು. ಈ ಎಲ್ಲಾ ಕೆಲಸಗಳಿಗೆ ಜಿಲ್ಲೆಯ ಅಧಿಕಾರಿಗಳು ಸಹಕಾರ ನೀಡಿದ್ದರು, ಜಿಲ್ಲೆಯಲ್ಲಿ ನಿಷ್ಠಾವಂತ ಅಧಿಕಾರಿಗಳ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡದಿರಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

ನಮ್ಮಲ್ಲಿರುವ ನದಿ ಸೇತುವೆಗಳು ಸೂಸೈಡ್ ಪಾಯಿಂಟ್ ಗಳಾಗುತ್ತಿದ್ದು ಈ ಹಿನ್ನಲೆಯಲ್ಲಿ ಸೇತುವೆಗಳಿಗೆ ಗಾಜಿನ ಮಾದರಿಯಲ್ಲಿ ತಡೆಗೋಡೆ ನಿರ್ಮಿಸಬೇಕು. ಸಿಸಿಟಿವಿ ಕ್ಯಾಮೆರಾ, ಬೀದಿ ದೀಪಗಳ ಅಗತ್ಯವೂ ಇದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನಮತಿ ನೀಡಿದ್ದಲ್ಲಿ ರಾಜ್ಯ ಸರಕಾರ ಇದನ್ನು ಮಾಡಬೇಕು ಎಂದರು.