LATEST NEWS
ಉಡುಪಿಯ ಕುತ್ಯಾರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ

ಉಡುಪಿಯ ಕುತ್ಯಾರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ
ಮಂಗಳೂರು ಡಿಸೆಂಬರ್ 25: ಕರಾವಳಿಯ ಉಭಯ ಜಿಲ್ಲೆಗಳ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಉಡುಪಿ ಜಿಲ್ಲೆಗ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಈ ನಡುವೆ ಗ್ರಹಣದ ಹಿನ್ನೆಲೆಯಲ್ಲಿ ಸಿ ಎಂ ಉದ್ಘಾಟಿಸಿದ ಕುತ್ಯಾರಿನ ಹೋಮ ಕಾರ್ಯಕ್ರಮ ಪ್ರಾಮುಖ್ಯತೆ ಪಡೆದಿದೆ.
ಉಡುಪಿಗೆ ಎರಡು ದಿನಗಳ ಬಳಿಕ ಮತ್ತೆ ಆಗಮಿಸಿರುವ ಸಿ ಎಂ ಯುಡಿಯೂರಪ್ಪ ಕೃಷ್ಣ ಮಠದ ಸಮೀಪ ೨ ಕೋಟಿ ರೂಪಾಯಿ ವೆಚ್ಚದ ಸಾರ್ವಜನಿಕ ಶೌಚಾಲಯವನ್ನು ಉದ್ಘಾಟಿಸಿದರು. ಮೂಡಬಿದಿರೆಯಿಂದ ನೇರವಾಗಿ ಉಡುಪಿ ಕೃಷ್ಣ ಮಠಕ್ಕೆ ಆಗಮಿಸಿದ ಸಿ ಎಂ ಸ್ವಚ್ಛಾಂಗಣ ಉದ್ಘಾಟನೆ ಬಳಿಕ ಫಲಿಮಾರು ಶ್ರೀಗಳ ಜೊತೆ ಮಠಕ್ಕೆ ತೆರಳಿ ಕೃಷ್ಣನ ದರ್ಶನ ಪಡೆದರು.

ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕುತ್ಯಾರಿಗೆ ತೆರಳಿದರು. ಧಾರ್ಮಿಕ ಪರಿಷತ್ ಸದಸ್ಯರಾದ ಕೇಂಜ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ಯಾಗ ಸಂಘಟನಾ ಸಮಿತಿ ಆಯೋಜನೆಯಲ್ಲಿ 6 ದಿನಗಳ ಕಾಲ ನಡೆಯುವ ಕಾರ್ಯಕ್ರಮವನ್ನು ಸಿ ಎಂ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಬಲು ಅಪರೂಪ ಮತ್ತು ವಿಶೇಷವಾದ ಸಹಸ್ರಮಾನ ನವ ಕುಂಡ ಅಥರ್ವ ಶೀರ್ಷಯಾಗ ನಡೆಯಲಿದೆ ಅದೇ ರೀತಿ ಗ್ರಹಣದ ಹಿನ್ನೆಲೆಯಲ್ಲಿ ಉಂಟಾಗಬಹುದಾದ ಸಂಭಾವ್ಯ ದೋಷ ಪರಿಹಾರದ ಸಲುವಾಗಿ ಲೋಕ ಕಲ್ಯಾಣಾರ್ಥ ಈ ಅಥರ್ವ ಶೀರ್ಷ ಯಾಗ ನಡೆಯುತ್ತಿದೆ.
ಕುತ್ಯಾರಿಗೆ ಆಗಮಿಸಿದ ಸಿ ಎಂ ಸುದರ್ಶನ ಹೋಮ ಸೂರ್ಯಗ್ರಹಣ ಶಾಂತಿ ಹೋಮದಲ್ಲಿ ಪಾಲ್ಗೊಂಡರು ಜ್ಯೋತಿಷ್ಯದ ಬಗ್ಗೆ ಅಪಾರ ನಂಬಿಕೆ ಇರುವ ಸಿ ಎಂ ನಾಳೆ ನಡೆಯಲಿರುವ ಕಂಕಣ ಗ್ರಹಣದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಮಹತ್ವ ಪಡೆದಿದೆ.