Connect with us

    LATEST NEWS

    Clean City ಯಲ್ಲಿ ಕೊರೊನಾ ಜೊತೆಗೆ ಕರೋಡೋ (ಕೋಟ್ಯಾಂತರ) ವೈರಸ್ ಉತ್ಪಾದಿಸುವ ಘಟಕ….!

    Clean City ಯಲ್ಲಿ ಕೊರೊನಾ ಜೊತೆಗೆ ಕರೋಡೋ (ಕೋಟ್ಯಾಂತರ) ವೈರಸ್ ಉತ್ಪಾದಿಸುವ ಘಟಕ….!

    ಮಂಗಳೂರು ಫೆಬ್ರವರಿ 5: ವಿಶ್ವದೆಲ್ಲೆಡೆ ಕೊರೊನಾ ವೈರಸ್ ನ ಕುರಿತ ಆತಂಕ ಹೆಚ್ಚುತ್ತಿದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಜೊತೆಗೆ ಕರೋಡೋ (ಕೋಟ್ಯಾಂತರ) ವೈರಸ್ ಗಳನ್ನು ಉತ್ಫಾದಿಸುವ ಹಲವು ಘಟಕಗಳಿವೆ. ಇಂಥಹುದೇ ಒಂದು ಘಟಕ ಮಂಗಳೂರು ಹೊರವಲಯದ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಬರುವ ಕಾಚಾರು ಎಂಬಲ್ಲಿ ನಿರ್ಮಾಣಗೊಂಡಿದೆ.

    ಬೀರಿಯಿಂದ- ದೇರಳಕಟ್ಟೆ ಸಂಪರ್ಕಿಸುವ ರಸ್ತೆ ಮಧ್ಯೆ ಬರುವ ಈ ಕಾಚಾರು ಸೇತುವೆಯ ಎರಡೂ ಭಾಗದಲ್ಲೂ ವೈರಾಣು ಉತ್ಪಾದನೆ ಭಾರೀ ಜೋರಾಗಿ ನಡೆಯುತ್ತಿದೆ.ಕೆಲವೇ ತಿಂಗಳ ಹಿಂದೆ ಇಲ್ಲಿ ಹಳೆಯ ಸೇತುವೆಯನ್ನು ಇಲ್ಲಿ ಹರಿಯುವ ಕಾಚಾರು ಹೊಳೆಗೆ ಹೊಸ ಸೇತುವೆಯನ್ನು ನಿರ್ಮಿಸಲಾಗಿದೆ.

    ಇದೀಗ ಈ ಕಾಚಾರು ಹೊಳೆಯೇ ವಿವಿಧ ಮಾದರಿಯ ವೈರಾಣು ಉತ್ಪತ್ತಿ ಮಾಡುವ ಘಟಕವಾಗಿ ಬದಲಾಗಿದ್ದು, ಕೋಳಿ ತ್ಯಾಜ್ಯ, ಸತ್ತ ಕೋಳಿ ,ಇತರೆ ಹಸಿ ತ್ಯಾಜ್ಯಗಳನ್ನು ಇಲ್ಲಿ ಸುರಿದು ಈ ರೋಗಾಣುಗಳಿಗೆ ಆಹಾರ ಪೂರೈಸುವ ಕಾರ್ಯ ನಡೆಯುತ್ತಿದೆ.

    ಕೋಳಿ ತ್ಯಾಜ್ಯಗಳನ್ನು ಹಾಕುತ್ತಿರುವ ಕಾರಣ ಪರಿಸರವೆಲ್ಲಾ ಗಬ್ಬು ನಾರುತ್ತಿದ್ದು, ನಾಯಿ, ಹದ್ದು,ಕಾಗೆ ಎಲ್ಲವೂ ಇಲ್ಲಿಯೇ ಬೀಡು ಬಿಟ್ಟಿವೆ. ಪಟ್ಟಣ ಪಂಚಾಯತ್ ನ ಕೂಗಳತೆಯ ದೂರದಲ್ಲಿ ಇಂಥ ಅಕ್ರಮಗಳು ನಡೆಯುತ್ತಿದ್ದರೂ ಸಂಬಂಧಟ್ಟವರು ಯಾವ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕರದ್ದಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *