FILM
ಜನಮೆಚ್ಚುಗೆ ಗಳಿಸಿದ ಲಯನ್ಸ್ ಚೇತನಾ ಬ್ಯೂಟಿ ಕಾಂಟೆಸ್ಟ್

ಜನಮೆಚ್ಚುಗೆ ಗಳಿಸಿದ ಲಯನ್ಸ್ ಚೇತನಾ ಬ್ಯೂಟಿ ಕಾಂಟೆಸ್ಟ್
ಮಂಗಳೂರು, ಫೆಬ್ರವರಿ 05 : ಮಂಗಳೂರು ಲಯನ್ಸ್ ಕ್ಲಬ್, ಲಯನೆಸ್ಸ್ ಕ್ಲಬ್ ಹಾಗೂ ಚೇತನಾ ಬ್ಯೂಟಿ ಅಕಾಡಮಿ ಸಹಯೋಗದಲ್ಲಿ ಅತ್ಯಂತ ಆಕರ್ಷಣೀಯ ಭಾರತೀಯ ವಧುವಿನ ವಿನ್ಯಾಸದ ಫ್ಯಾಷನ್ ಶೋ ಮಂಗಳೂರಿನಲ್ಲಿ ಆಯೋಜಿಸಲಾಗಿತ್ತು.
ದೇಶದ ವಿವಿಧ ರಾಜ್ಯಗಳ, ಜಾತಿ, ಧರ್ಮದ ವಧುವಿನ ವಸ್ತ್ರ ಹಾಗೂ ವರ್ಣಾಲಂಕಾರದ ಪೋಷಾಕುಗಳನ್ನು ಧರಿಸಿದ ಮಾಡೆಲ್ ಗಳು ರಾಂಪ್ ನಲ್ಲಿ ಹೆಜ್ಜೆ ಹಾಕುವ ಮೂಲಕ ದೇಶದ ಸಂಸ್ಕೃತಿಯನ್ನು ಪರಿಚಯಿಸಿದರು. ಮರಾಠಿ, ಬೆಂಗಾಲಿ, ಕ್ರಿಶ್ಚಿಯನ್, ಕೊಂಕಣಿ ಹಾಗೂ ಸ್ಥಳೀಯವಾಗಿ ಕರಾವಳಿಯ ಮಂಗಳೂರು ವಧುಗಳ ವಿನ್ಯಾಸಗಳ ಮೂಲಕ ಮಾಡೆಲ್ ಗಳು ನೆರೆದಿದ್ದ ಫ್ಯಾಷನ್ ಪ್ರಿಯರ ಗಮನ ಸೆಳೆದರು.
ದಸರಾ ಹಬ್ಬದ ದಿನಗಳಲ್ಲಿ ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ಪ್ರತಿಷ್ಟಾಪಿಸಲ್ಪಡುವ ಶಾರದಾ ಮಾತೆಯಂತೆಯೇ ಅಲಂಕಾರ ಮಾಡಿ ರಾಂಪ್ ಮೇಲೆ ನಡೆದ ಮಾಡಲ್ ಗೆ ಭಾರೀ ಕರತಾಡನದ ಮೆಚ್ಚುಗೆಯೂ ದೊರೆಯಿತು.
