LATEST NEWS
8ನೇ ತರಗತಿ ವಿದ್ಯಾರ್ಥಿನಿ ಅಪಹರಣ, ಸಾಮೂಹಿಕ ಅತ್ಯಾಚಾರ
ಗುರುಗ್ರಾಮ, ಮಾರ್ಚ್ 13: ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದುಮುಂದು ನೋಡುವಂಥ ಪರಿಸ್ಥಿತಿ ಎದುರಾಗಿದ್ದು, ದೇಶವೇ ಬೆಚ್ಚಿಬೀಳುವ ಘಟನೆಯೊಂದು ಗುರುಗ್ರಾಮದಲ್ಲಿ ನಡೆದಿದೆ. ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ಎಂಟನೇ ತರಗತಿ ವಿದ್ಯಾರ್ಥಿನಿಯನ್ನು ಮೂವರು ಯುವಕರು ಅಪಹರಿಸಿದ್ದು, ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಕ್ರೀಡಾ ಕಾರ್ಯಕ್ರಮದಲ್ಲಿ ಬಾಲಕಿ ಭಾಗಿಯಾಗಿದ್ದು, ಮೂವರು ಯುವಕರು ಆಕೆಯನ್ನು ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಅತ್ಯಾಚಾರ ಎಸಗಿ ವಿಡಿಯೋ ಮಾಡಿದ್ದಾರೆ. ಹಾಗೂ ಆ ವಿಡಿಯೋವನ್ನು ಸಾಕಷ್ಟು ಮಂದಿಗೆ ಕಳಿಸಿದ್ದಾರೆ.
ಅತ್ಯಾಚಾರದ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಹೆದರಿದ ಬಾಲಕಿ ತನ್ನ ತಂದೆ ತಾಯಿಗೂ ವಿಷಯ ತಿಳಿಸಿಲ್ಲ. ಇದಾದ ಕೆಲ ಸಮಯದ ನಂತರ ವಿಡಿಯೋ ಬಾಲಕಿಯ ತಂದೆಯ ಗಮನಕ್ಕೆ ಬಂದಿದ್ದು, ಈ ಬಗ್ಗೆ ಮಗಳನ್ನು ವಿಚಾರಿಸಿದ್ದಾರೆ.
ಆಗ ಬಾಲಕಿ ಎಲ್ಲ ವಿಷಯವನ್ನು ಹೇಳಿದ್ದಾರೆ. ಮೂವರ ಮುಖಗಳು ವಿಡಿಯೋದಲ್ಲಿ ಕ್ಯಾಪ್ಚರ್ ಆಗಿದ್ದು, ಪೊಲೀಸರು ಅವರನ್ನು ಗುರುತಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.
You must be logged in to post a comment Login