Connect with us

DAKSHINA KANNADA

ಮಲ್ಲೂರಿನ ಜನತೆ ದೈವಕ್ಕೆ ಯಾವುದೇ ಅಪಚಾರವೆಸಗಿಲ್ಲ-ಗ್ರಾಮಸ್ಥರ ಸ್ಪಷ್ಟನೆ

ಮಲ್ಲೂರಿನ ಜನತೆ ದೈವಕ್ಕೆ ಯಾವುದೇ ಅಪಚಾರವೆಸಗಿಲ್ಲ-ಗ್ರಾಮಸ್ಥರ ಸ್ಪಷ್ಟನೆ

ಮಂಗಳೂರು, ಮೇ 5: ಆವೇಶ ಭರಿತ ದೈವವೊಂದು ತನ್ನ ಆಯುಧವನ್ನು ನೆಲಕ್ಕೆ ಊರಿ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಅಸ್ಪಷ್ಟ ಮಾಹಿತಿಗಳೂ ಹರಿದಾಡುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಇದೀಗ ಮಲ್ಲೂರಿನ ಜನತೆಯೇ ಸ್ಪಷ್ಟನೆಯನ್ನು ನೀಡಿದ್ದಾರೆ.

ಮಲ್ಲೂರಿನ ಮಲರಾಯ ಧೂಮಾವತಿ-ಬಂಟ ದೈವಸ್ಥಾನದಲ್ಲಿ ನಡೆದಂತಹ ಈ ಘಟನೆಯಲ್ಲಿ ಸ್ಥಳೀಯ ಗ್ರಾಮಸ್ಥರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವಂತಹ ಪ್ರಯತ್ನಗಳಿಗೆ ಗ್ರಾಮಸ್ಥರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ.

ದೈವಸ್ಥಾನದಲ್ಲಿ ಬಂಟ ದೈವದ ನೇಮೋತ್ಸವ ನಡೆಯುತ್ತಿದ್ದ ಸಂದರ್ಭದಲ್ಲಿ ಬಂಟ ದೈವದ ಪಾತ್ರಧಾರಿ ದೈವಸ್ಥಾನಕ್ಕೆ ಬಂದಿದ್ದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯಿದೀನ್ ಬಾವಾ ಅವರಿಗೆ ಹೂವಿನ ಹಾರ ಹಾಕುವಂತೆ ದೈವಸ್ಥಾನದ ಮುಖ್ಯಸ್ಥರಿಗೆ ಸೂಚನೆಯನ್ನು ನೀಡಿದ್ದರು.

ಇದಕ್ಕೆ ಸ್ಥಳೀಯರು ಆಕ್ಷೇಪವನ್ನು ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಬಂಟ ದೈವದ ಪಾತ್ರಧಾರಿ ದೈವದ ಆಯುಧವನ್ನು ನೆಲಕ್ಕೆ ಊರಿ ತನ್ನ ಆಕ್ರೋಶ ವ್ಯಕ್ತಪಡಿಸಿದ್ದರು.

ದೈವದ ಪಾತ್ರಧಾರಿಯ ಈ ರೀತಿಯ ವರ್ತನೆ ಸ್ಥಳೀಯ ಗ್ರಾಮಸ್ಥರ ಅಸಮಾಧಾನಕ್ಕೂ ಕಾರಣವಾಗಿದೆ.

ದೈವದ ಮುಖ್ಯಸ್ಥರು ಕುಳಿತುಕೊಳ್ಳುವ ಆಸನವನ್ನು ಶಾಸಕ ಮೊಯಿದೀನ್ ಬಾವಾರಿಗೆ ಬಿಟ್ಟುಕೊಟ್ಟದ್ದು ಒಂದು ತಪ್ಪಾದರೆ, ಇನ್ನೊಂದು ದೈವ ಯಾರಿಗೂ ಹಾರ ಹಾಕುವಂತೆ ಸೂಚಿಸುವ ಪದ್ಧತಿ ದೈವಾರಾಧನೆಯಲ್ಲಿ ಇಲ್ಲಿಯವರೆಗೂ ಕಂಡು ಬಂದಿಲ್ಲ.

ಆದರೆ ಮಲ್ಲೂರಿನ ದೈವದ ಪಾತ್ರಧಾರಿ ಯಾರನ್ನೋ ಮೆಚ್ಚಿಸಲು ಈ ರೀತಿಯ ಹೊಸ ಸಂಪ್ರದಾಯವನ್ನು ಹುಟ್ಟು ಹಾಕಿರುವುದು ಗ್ರಾಮಸ್ಥರನ್ನು ಕೆರಳಿಸಿದೆ.

ಮಲ್ಲೂರಿನ ಮಲರಾಯ ಧೂಮಾವತಿ-ಬಂಟ ದೈವಸ್ಥಾನದ ಜೀರ್ಣೋದ್ಧಾರಕ್ಕಾಗಿ ಸ್ಥಳೀಯ ಗ್ರಾಮಸ್ಥರು ಹಗಲಿರುಳು ಎನ್ನದೆ ದುಡಿದಿದ್ದು, ಕೇವಲ ದೈವದ ಮೇಲಿನ ನಂಬಿಕೆಗೋಸ್ಕರವೇ ಈ ಕಾರ್ಯವನ್ನು ನಡೆಸಿದ್ದಾರೆ.

ಈ ನಡುವೆ ದೈವಕ್ಕೆ ಅಪಚಾರವಾಗುವಂತಹ ಕೆಲಸವನ್ನು ದೈವದ ಪಾತ್ರಧಾರಿ ಮಾಡಿರುವುದನ್ನು ಸಹಿಸಲಾರದೆ ಗ್ರಾಮಸ್ಥರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು.

ಇತ್ತೀಚಿನ ದಿನಗಳಲ್ಲಿ ಅತ್ಯಂತ ನಂಬಿಕೆಗೆ ಪಾತ್ರವಾಗಿರುವ ದೈವಾರಾಧನೆಯು ಇಂಥಹ ಕೆಲವು ಘಟನೆಗಳಿಂದಾಗಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ.

ದೈವದ ಪಾತ್ರಧಾರಿಗಳ ಕೆಲವು ಅತಿರೇಕದ ವರ್ತನೆಗಳು ದೈವದ ಪಾತ್ರಧಾರಿಯ ಮೇಲೆ ಇದ್ದಂತಹ ಗೌರವವನ್ನು ಕಳೆದುಕೊಳ್ಳುವಂತೆಯೂ ಮಾಡುತ್ತಿದೆ ಎನ್ನುವ ಸತ್ಯವನ್ನು ಎಲ್ಲರೂ ಒಪ್ಪಿಕೊಳ್ಳುವಂತದ್ದೇ.

VIDEO

Share Information
Continue Reading
Advertisement
Click to comment

Leave a Reply

Your email address will not be published. Required fields are marked *