LATEST NEWS
ಅಗಸ್ಟ್ 19 ರಂದು ನಡೆಯಬೇಕಾಗಿದ್ದ ಮಂಗಳೂರು ನಾಗರೀಕ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆ ರದ್ದು

ಅಗಸ್ಟ್ 19 ರಂದು ನಡೆಯಬೇಕಾಗಿದ್ದ ಮಂಗಳೂರು ನಾಗರೀಕ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆ ರದ್ದು
ಮಂಗಳೂರು ಅಗಸ್ಟ್ 16: ಮಂಗಳೂರು ನಗರ ಕಮೀಷನರೇಟ್ ಘಟಕಕ್ಕೆ ಸಂಬಂಧಿಸಿದ ನಾಗರೀಕ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅಗಸ್ಟ್ 19 ರಂದು ನಡೆಯಲಿರುವ ಲಿಖಿತ ಪರೀಕ್ಷೆ ರದ್ದಾಗಿದೆ.
ಮಂಗಳೂರು ನಗರ ಕಮೀಷನರೇಟ್ ಘಟಕಕ್ಕೆ ಸಂಬಂಧಿಸಿದಂತೆ ಈ ಪರೀಕ್ಷೆ ನಡೆಯಲಿದ್ದು, ಮಂಗಳೂರಿನ ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದ್ರೆಯಲ್ಲಿ ಲಿಖಿತ ಪರೀಕ್ಷೆ ನಡೆಸಲು ನಿಗದಿಪಡಿಸಲಾಗಿತ್ತು.

ಆದರೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯ ಕಾರಣದಿಂದಾಗಿ ಪ್ರವಾಹ ಉಂಟಾಗಿರುವ ಹಿನ್ನಲೆಯಲ್ಲಿ ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಅಡಚಣೆ ಉಂಟಾಗುವುದರಿಂದ ಅಗಸ್ಟ್ 19 ರಂದು ನಿಗದಿಪಡಿಸಿದ್ದ ಲಿಖಿತ ಪರೀಕ್ಷೆಯನ್ನು ರದ್ದು ಪಡಿಸಲಾಗಿದೆ. ಮುಂದಿನ ಲಿಖಿತ ಪರೀಕ್ಷೆಯ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.