Connect with us

LATEST NEWS

ಖಾಸಗಿ ಬಸ್ ಚಾಲಕನ ಕೊಲೆ ಯತ್ನ – ಆರೋಪಿ ಬೈಕ್ ಸವಾರ ಆರೆಸ್ಟ್

ಮಂಗಳೂರು ಜನವರಿ 21: ಸೈಡ್ ಕೊಡ ವಿಚಾರಕ್ಕೆ ಖಾಸಗಿ ಬಸ್ ಚಾಲಕನ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬೈಕ್ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ.


ಬಂಧಿತನನ್ನು ಫೈಸಲ್ ನಗರದ ನಿವಾಸಿ ಅಶ್ರಫ್ ಎಂದು ಗುರುತಿಸಲಾಗಿದೆ. ಜನವರಿ 19ರಂದು ರೂಟ್ ನಂಬರ್ 23ರಲ್ಲಿ ಸುವರ್ಣ ಬಸ್ ರಾತ್ರಿ 6.30 ಸುಮಾರಿಗೆ ಸ್ಟೇಟ್ ಬ್ಯಾಂಕ್​ನಿಂದ ಫೈಸಲ್ ನಗರಕ್ಕೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಕೊನೆಯ ಸ್ಟಾಪ್ ತಲುಪುವ ಮೊದಲೇ ಬೈಕ್​ನಲ್ಲಿ ಬಂದಿರುವ ಅಶ್ರಫ್ ಎಂಬಾತ ಸೈಡ್ ಕೊಡದ ವಿಚಾರದಲ್ಲಿ ಬಸ್ ಗಡ್ಡಗಟ್ಟಿ ತಗಾದೆ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದಿದ್ದು, ಚಾಲಕ ಸಂಪತ್ ಪೂಜಾರಿ ಬಸ್​ನಿಂದ ಇಳಿದು ಮಾತಿಗೆ ನಿಂತಿದ್ದಾರೆ. ಈ ಸಂದರ್ಭ ಬೈಕ್ ಸವಾರ ಅಶ್ರಫ್ ತನ್ನ ಕೈಯಲ್ಲಿ ಹಿಡಿದುಕೊಂಡಿದ್ದ ಬಾಟಲಿಯಲ್ಲಿರುವ ಪೆಟ್ರೋಲ್ ಎರಚಿ ಕೊಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿತ್ತು.

ಇದೀಗ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಆರೋಪಿ ಅಬ್ದುಲ್ ವಿರುದ್ಧ ರೌಡಿಶೀಟ್ ತೆರೆದು ಗೂಂಡಾ ಕಾಯ್ದಯಡಿ ಪ್ರಕರಣ ದಾಖಲಿಸಲು ಯೋಚಿಸಲಾಗಿದೆ ಎಂದರು.

Advertisement
Click to comment

You must be logged in to post a comment Login

Leave a Reply