ಕ್ರೈಸ್ತ ಬ್ರ್ರದರ್ ಆತ್ಮಹತ್ಯೆಗೆ ಶರಣು: ಕಾರಣ ನಿಗೂಢ
ಕ್ರೈಸ್ತ ಬ್ರ್ರದರ್ ಆತ್ಮಹತ್ಯೆಗೆ ಶರಣು: ಕಾರಣ ನಿಗೂಢ
ಶಿವಮೊಗ್ಗ, ನವೆಂಬರ್ 02 : ನೇಣು ಬಿಗಿದು ಕ್ರೈಸ್ತ ಧಾರ್ಮಿಕ ಗುರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ನಗರದ ಹೊರವಲಯ ಆಲ್ಕೋಳದ ಬಳಿಯಿರುವ ಚೈತನ್ಯ ಭವನದ ಅತಿಥಿ ಕೊಠಡಿಯಲ್ಲಿ ನಡೆದಿದೆ.
ಮೃತನನ್ನು ಬ್ರದರ್ ಸುನೀಲ್ ಫೆರ್ನಾಂಡಿಸ್ ಎಂದು ಗುರುತ್ತಿಸಲಾಗಿದೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪದ ಉಜಿರೆಯ ನಿವಾಸಿಯಾದ ಸುನೀಲ್ ಫರ್ನಾಂಡಿಸ್ (33), ಕಳೆದ 14 ವರ್ಷಗಳಿಂದ ‘ಬ್ರದರ್’ ಆಗಿ ಸೇವೆ ಸಲ್ಲಿಸುತ್ತಿದ್ದರು.
ಚರ್ಚ್ ‘ಫಾದರ್’ ಧೀಕ್ಷೆ ಪಡೆಯುವ ಹಂತದಲ್ಲಿದ್ದರು ಎಂದು ತಿಳಿದು ಬಂದಿದೆ.
ಕೊಠಡಿಯಲ್ಲಿ ನೇನು ಬಿಗಿದ ಸ್ಥಿತಿಯಲ್ಲಿ ಬ್ರದರ್ ಸುನೀಲ್ ಫೆರ್ನಾಂಡಿಸ್ ಅವರ ಶವ ಪತ್ತೆಯಾಗಿದೆ.
ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪಿ.ಎಸ್.ಐ. ಗಿರೀಶ್ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login