LATEST NEWS
ಯಕ್ಷಗಾನ ಕ್ಷೇತ್ರದ “ರಾಜಕುಮಾರ” ಚಿಟ್ಟಾಣಿ ಇನ್ನಿಲ್ಲ

ಯಕ್ಷಗಾನ ಕ್ಷೇತ್ರದ “ರಾಜಕುಮಾರ” ಚಿಟ್ಟಾಣಿ ಇನ್ನಿಲ್ಲ
ಉಡುಪಿ ಅಕ್ಟೋಬರ್ 3: ಬಡಗು ತಿಟ್ಟು ಯಕ್ಷರಂಗದ ಮಹಾನ್ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಇನ್ನಿಲ್ಲ. 86 ವರ್ಷ ಪ್ರಾಯದ ಚಿಟ್ಟಾಣಿ ಕಳೆದ ನಾಲ್ಕು ದಿನಗಳಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಟ್ಟಾಣಿಯವರು ನ್ಯಮೋನಿಯಾದಿಂದ ಬಳಲುತ್ತಿದ್ದರು. ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಯಕ್ಷರಂಗದ ಏಕೈಕ ಪದ್ಮ ಪ್ರಶಸ್ತಿ ವಿಜೇತ ಕಲಾವಿದರಾದ ಚಿಟ್ಟಾಣಿ ಸುಮಾರು 7 ದಶಕಗಳಿಂದ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಕೌರವ ,ಕೀಚಕ, ದುಷ್ಟಬುದ್ದಿ , ಕಾರ್ತವೀರ್ಯ ಮುಂತಾದ ಪಾತ್ರಗಳು ಅವರಿಗೆ ಖ್ಯಾತಿ ತಂದಿವೆ. ಪತ್ರಿ, ಒರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅವರು ಅಗಲಿದ್ದಾರೆ. ಚಿಟ್ಟಾಣಿ ಅವರ ಅಗಲಿಕೆ ಯಕ್ಷಗಾನ ರಂಗಕ್ಕೆ ತುಂಬಲಾರದ ನಷ್ಟವಾಗಿದೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಾಮಚಂದ್ರ ಚಿಟ್ಟಾಣಿ ಮೂಲತ ಉತ್ತರ ಕನ್ನಡ ಜಿಲ್ಲೆಯ ಚಿಟ್ಟಾಣಿಯವರು, 7ನೇ ವರ್ಷದಲ್ಲಿಯೇ ಯಕ್ಷಗಾನ ಆರಂಭಿಸಿದ ಅವರು 14ನೇ ವರ್ಷಕ್ಕೆ ಯಕ್ಷಗಾನದ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ಚಿಟ್ಟಾಣಿ ಯಕ್ಷಗಾನಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ತಂದುಕೊಟ್ಟವರು ಡಾ. ರಾಜ್ ಕುಮಾರ್ ಅವರಿಂದ ಹೊಗಳಿಸಿಕೊಂಡಿದ್ದ ಚಿಟ್ಟಾಣಿ ಕೌರವ, ಕೀಚಕ ಪಾತ್ರದಲ್ಲಿ ಮಿಂಚುತ್ತಿದ್ದ ಕಲಾವಿದರಾಗಿದ್ದರು, ನವರಸಗಳನ್ನು ರಂಗದ ಮೇಲೆ ತರುತ್ತಿದ್ದ ಮೇರು ಕಲಾವಿದರಾಗಿ ಪ್ರಸಿದ್ದಿ ಹೊಂದಿದ್ದರು.